ಪ್ರಮೋದ ಜೋಶಿ ಅವರ ಕವಿತೆ-ಒಂದು

ಒಂದು ಮರ
ಕಾಡಿಗೇ ಜೀವ ಕೊಟ್ಟರೆ

ಒಂದು ನಗು
ಗೆಳೆತನ ಬೆಳೆಸುವುದು

ಒಂದು ಕೈ
ಜೀವವನ್ನೆ ಎತ್ತಿ ಹಿಡಿಯುತ್ತೆ

ಒಂದು ವಿಚಾರ
ಭವಿಷ್ಯದ ರೂಪವನ್ನೆ ಬದಲಿಸಿದರೆ

ಒಂದು ಮೊಂಬತ್ತಿ
ಕತ್ತಲನ್ನು ಓಡಿಸುತ್ತೆ

ಒಂದು ಭರವಸೆಯ ಕಿರಣ
ಸ್ಪೂರ್ತಿಯಾಗುತ್ತೆ

ಒಂದು ಸ್ಪರ್ಷ
ಆತ್ಮೀಯತೆ ಬೆಳೆಸುತ್ತೆ

ಒಂದು ಬದುಕು
ಜೀವನ ಬದಲಾಯಿಸಿ

ಆ ಒಂದು ಇಂದೇ ಆಗಿ
ಜೀವನ ನಡೆಸುತ್ತೆ

ಜೀವನದಿಂದ ಆರಂಭವಾದ ಒಂದು
ಕೊನೆಯಲ್ಲೂ ನಮ್ಮೊಂದಿಗೆ ಒಂದಾಗುತ್ತೆ


2 thoughts on “ಪ್ರಮೋದ ಜೋಶಿ ಅವರ ಕವಿತೆ-ಒಂದು

  1. ಒಂದರಿಂದ
    ಪ್ರಾರಂಭ
    ಒಂದಾಗಿ ಜೀವನ
    ಕಡೆಗೊಂದಾಗಿ
    ಅಂತ್ಯ……

    ಭಾಳ ಛಂದ ಸರ್

Leave a Reply

Back To Top