ಡಾ.ಶಿವಕುಮಾರ ಮಾಲಿಪಾಟೀಲ ಅವರ ಕವಿತೆ-ಏನಾಗುತ್ತಿದೆ ಇಲ್ಲಿ?

ಸಾವಿರಾರು ಫೋಟೋಗಳನ್ನು ತೆಗೆಯುತ್ತಿದ್ದೇವೆ ಒಂದೂ ತೊಳೆಸುತ್ತಿಲ್ಲ ಮನಸ್ಸಿನಲ್ಲಿ ಉಳಿಯುತ್ತಿಲ್ಲ

ಪ್ರತಿದಿನ ಸಾವಿರಾರು ಸಂದೇಶ ಕಳಿಸುತ್ತೇವೆ
ಒಂದೂ ಹೃದಯ ಮುಟ್ಟುತ್ತಿಲ್ಲ

ಲಕ್ಷಾಂತರ ಪುಸ್ತಕಗಳನ್ನು ಮುದ್ರಿಸುತ್ತಿದ್ದೇವೆ
ಬುದ್ದಿ ವಿಕಸನ ಆಗುತ್ತಿಲ್ಲ

ದೊಡ್ಡ ದೊಡ್ಡ ಬಂಗಲೆ ಕಟ್ಟಿಸುತ್ತಿದ್ದೇವೆ
ಮನೆಯಲ್ಲಿ ಇರಲು ಸಮಯವೇ ಇಲ್ಲ

ನೂರಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುತ್ತಿದ್ದೇವೆ
ನಿಜವಾದ ವಿದ್ಯೆ ಸಿಗುತ್ತಿಲ್ಲ

ಸಾವಿರಾರು ಆಸ್ಪತ್ರೆಗಳನ್ನು ಕಟ್ಟಿಸುತ್ತಿದ್ದೇವೆ
ಆರೋಗ್ಯ ಸುಧಾರಿಸುತ್ತಿಲ್ಲ

ಲಕ್ಷಾಂತರ ಹಣ ಗಳಿಸುತ್ತಿದ್ದೇವೆ
ಶುದ್ಧ ಗಾಳಿ ನೀರು ಅನ್ನ ಸಿಗುತ್ತಿಲ್ಲ

ನೂರಾರು ಪಕ್ಷಗಳು , ಸಾವಿರಾರು ಸಂಘಟನೆಗಳು , ಲಕ್ಷಾಂತರ ನಾಯಕರು ,ಕೋಟ್ಯಂತರ ಅಧಿಕಾರಿಗಳು ಇದ್ದರೂ ಜನರ ಸಮಸ್ಯೆಗಳು ಬಗೆಹರಿಯುತ್ತಿಲ್ಲ

ನೂರಾರು ಮಾಧ್ಯಮಗಳನ್ನು ಸ್ಥಾಪಿಸುತ್ತಿದ್ದೇವೆ
ಸಮಾಜ ಬದಲಾವಣೆ ಆಗುತ್ತಿಲ್ಲ

ಸಾವಿರಾರು ಮಸೀದಿ ಮಂದಿರ
ಚರ್ಚೆಗಳನ್ನು ಕಟ್ಟುತ್ತಿದ್ದೇವೆ
ನಿಜವಾದ ಧರ್ಮ ತಿಳಿಯುತ್ತಿಲ್ಲ
ನಿಜವಾದ ಧರ್ಮ ಉಳಿಯುತ್ತಿಲ್ಲ

ಲಕ್ಷಾಂತರ ರಸ್ತೆಗಳನ್ನು ನಿರ್ಮಿಸಿದ್ದೇವೆ
ಬದುಕುವ ದಾರಿ ಕಾಣುತ್ತಿಲ್ಲ
…..
ಸಾವಿರಾರು App ಗಳಿದ್ದರೂ
ಯುವಕರಲ್ಲಿ ಬದುಕುವ Hope ಕಾಣುತ್ತಿಲ್ಲ


One thought on “ಡಾ.ಶಿವಕುಮಾರ ಮಾಲಿಪಾಟೀಲ ಅವರ ಕವಿತೆ-ಏನಾಗುತ್ತಿದೆ ಇಲ್ಲಿ?

Leave a Reply

Back To Top