ಶೃತಿ ರುದ್ರಾಗ್ನಿಅವರ ಕವಿತೆ-ನೋವುಗಳ ಆಭರಣ

ನೋವುಗಳನ್ನೇ
ಆಭರಣ
ಮಾಡಿಕೊಂಡ
ಹುಚ್ಚು
ಹೆಣ್ಣಿಗೆ
ಇನ್ಯಾವ
ಗೊಡವೆ..?

ಒಡವೆ
ಮತ್ತು
ಆಸೆ ಆಕಾಂಷೆಗಳ
ಆರೋಪವೇ
ಇಲ್ಲ.

ಸಾಕು…!!
ಮಡಿದು
ಮಣ್ಣಾದ
ಗೋರಿಗೊಂದು
ನನ್ನ
ಹೆಸರಿನ
ಪುಟ್ಟ ಕವಿತೆ ಎಂಬ
ಹೂ ಕಾಡು ಮಲ್ಲಿಗೆ…

ಬೇಡುವ
ಬಯಕೆ
ಬೆದರಿಕೆ
ಬೇಕಿಲ್ಲ.
ಹಮ್ಮು
ಬಿಟ್ಟ
ಹೆಣ್ಣಲ್ಲ.

ಕಾಮ
ಬೆಟ್ಟದ
ತುತ್ತ
ತುದಿಯಲ್ಲಿ
ನಿಂತು
ಅಹಂ
ಎಂಬ
ಕೆಳಮಟ್ಟದ
ಈ ಜನಸಾಮೂಹದ
ಜಾಗೃತಿಗೆ
ಜನ್ಮ ಕೊಟ್ಟಿರುವೆ.

ಗರ್ವದ ನೀತಿ
ನಿಯಮವೆಂಬ
ನಿಭಂದನೆಗೂ
ನನ್ನ
ಒಗ್ಗಿಸಿಕೊಂಡಿರುವೆ.

ಇನ್ನೇನಿದ್ದರೂ
ಜಗಕ್ಕೆ ಬಿಟ್ಟ
ಜಾರ ಸ್ತ್ರೀ
ಎಂಬ
ಮೂಲಕ್ಕೆ
ನಾನು
ಮೌನಿಯಾಗೇ
ನಿಲ್ಲುವೆ…


Leave a Reply

Back To Top