ನಾಗರಾಜ್ ಹರಪನಹಳ್ಳಿ ಅವರ ಹೊಸ ಕವಿತೆ”ಮುಂಗಾರಿನ ಜೋಗುಳಕೆ ನಿದ್ದೆ ಹೋಗಿದೆ”

ದಂಗೆ ಎದ್ದ ಮೋಡಗಳು
ಪ್ರವಾಸ ಹೊರಟಿವೆ
ಕೆಳಗೆ ಪರ್ವತ ಸಾಲು
ಪಡುವಣದ ಚೆಲುವಿಗೆ ಸೋತು ಹೋಗಿವೆ

ದಂಗೆ ಎದ್ದ ಮೋಡಗಳು ಅರಬ್ಬೀ ಕಡಲ ಕಂಡು ಸಂಭಾಷಣೆಗೆ ನಿಂತಿವೆ

ಮೋಡ ಬಿಡಿಸಿದ ಚಿತ್ರಕಂಡು
ಕಡಲು ಕುಣಿದಿದೆ
ದಂಡೆಯಲೊಂದು ದೋಣಿ
ಮುಂಗಾರಿನ ಜೋಗುಳಕೆ
ನಿದ್ದೆ ಹೋಗಿದೆ

ದಂಗೆ ಎದ್ದ ಮೋಡಗಳು
ಹಾಡ ಹಾಡಿವೆ
ಅದನು ಕೇಳಿ ಹಕ್ಕಿಯೊಂದು
ಬೆರಗನುಂಡಿದೆ

ಕಡಲ ರಾಗ ಹಕ್ಕಿ ಗಾನ
ಎದೆಯ ತುಂಬಿದೆ
ಒಲವು ಚೆಲುವು ಬೆರೆತ ಹೃದಯ
ಹಾಡಿ ಕುಣಿದಿದೆ

ದಂಗೆ ಎದ್ದ ಮೋಡಗಳು
ಪ್ರವಾಸ ಹೊರಟಿವೆ
ದಟ್ಟ ಕಾನನದಿ ಅವಳ ಕಂಡು
ಮಾತಿಗಿಳಿದಿವೆ
ಇದನು ಕಂಡ ನದಿ ನದಿಗಳು
ಮಣಿದು ಕುಣಿದಿವೆ


One thought on “ನಾಗರಾಜ್ ಹರಪನಹಳ್ಳಿ ಅವರ ಹೊಸ ಕವಿತೆ”ಮುಂಗಾರಿನ ಜೋಗುಳಕೆ ನಿದ್ದೆ ಹೋಗಿದೆ”

Leave a Reply

Back To Top