ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಗೌರವದ ಪಟ್ಟ

ಅವರು ನನ್ನ
ಕಥೆ ಕವನಗಳ
ಸಹಿಸದಿದ್ದರೆ
ಅದು ದಡ್ಡ
ಸಮಾಜದ ಆಸಹನೆಯ
ಮುಖ್ಯ ಲಕ್ಷಣ
ನಾನು ಸಮುದಾಯವನ್ನು
ವಿವಸ್ತ್ರಗೊಳಿಸುವದೀಲ್ಲ
ಕಾರಣ ಅದು
ಈಗಾಗಲೆ ಬೆತ್ತಲಾಗಿದೆ
ಅದಕ್ಕೆ ಮಾನ ಮುಚ್ಚಲು
ಬಟ್ಟೆ ಹೊಲಿಯುತ್ತಿಲ್ಲ
ಅದು ನನ್ನ ಕಸಬೂ ಅಲ್ಲ
ಅದು ದರ್ಜಿಯ ಕೆಲಸ
ಇಲ್ಲ ವಸ್ತ್ರ ವಿನ್ಯಾಸದವನ
ಚಿಂತೆ ಆಲೋಚನೆ
ಬೆತ್ತಲು ಜಗದಲ್ಲಿ
ನಾನು ಬಟ್ಟೆ ಹಾಕಿರುವೆ
ಅವರು ನನಗೆ
ಹುಚ್ಚ ಎನ್ನುವರು
ಅದು ನನಗೆ ಗೌರವದ ಪಟ್ಟ


5 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಗೌರವದ ಪಟ್ಟ

  1. ಅರ್ಥಪೂರ್ಣ ಮತ್ತು ಎಲ್ಲರ ವಿಚಾರಧಾರೆಯನ್ನು ಒರೆಗೆ ಹಚ್ಚುವಂತೆ ಮಾಡುವ ಕವನ

    ಸುಶಿ

Leave a Reply

Back To Top