ರಾಗರಂಜನಿ ಅವರ ಕವಿತೆ-ನನ್ನಪ್ಪ

ನನ್ನಪ್ಪನ ಕಿಸೆ
ತಳವಿಲ್ಲದ ಸೀಸೆ
ಆದರೂ ನಮಗಾಗಿಲ್ಲ ನಿರಾಸೆ
ಆಗಿದ್ದನವ ನಮ್ಮೆಲ್ಲರ ಒತ್ತಾಸೆ

ಅವನ ಕಿಸೆ ಸದಾ ಖಾಲಿ ಇರ್ತಿತ್ತು
ಇದ್ದ ಒಂದು ಚೂರೂ ನಮಗಾಗಿಯೇ ಖರ್ಚಾಗ್ತಿತ್ತು
ಅದರಲ್ಲೇ ನಮ್ಮೆಲ್ಲರ ಖುಷಿಯೇ ಅಡಗಿರುತಿತ್ತು

ಇಂದು ನನಗೆ ಯಾವುದಕ್ಕೂ ಕೊರತೆಯಿಲ್ಲ
ಆದರಿಂದು ಅಪ್ಪನಿಗೆ ದುಡಿಯುವ ಶಕ್ತಿಯಿಲ್ಲ
ಆದರೂ ಅಪ್ಪನ ಅಂದಿನ ಖಾಲಿಕಿಸೆ
ಮರೆತಿಲ್ಲ

ಹೆಣ್ಣಾದರೇನು ?
ಮದುವೆಯ ಬಳಿಕ ತವರನೆಂದಿಗೂ ಮರೆಯೆನು
ಅಪ್ಪನ ಕಿಸೆ ತುಂಬಿಸಲು ಯೋಚಿಸಿದೆ ನಾನು

ಆದರೆ…..
ಇಂದು ಅಪ್ಪ ಹಾಕುತ್ತಿದ್ದಾನೆ ಕಿಸೆ ಇಲ್ಲದ ಬನಿಯನ್ನು

Leave a Reply

Back To Top