ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್
ಸುಂದರಾತಿ ಸುಂದರ ಮೈ ಬಣ್ಣದ ಸುವರ್ಣ
ಪಳಗುಟ್ಟುವ ಲೋಲಕ್ಕಿನ ಶಂಕಾಕೃತಿ ಸುಕರ್ಣ
ಹಾಲಲಿ ಮಿಂದೆದ್ದು ಕನ್ಯೆಯ ಊಹೆಯಿತ್ತು
ಶಕುಂತಲೆಯ ಬಣ್ಣಿಸೆ ಬಳಸಿಹ ಪದ ಶ್ವೇತವರ್ಣ
ಒಲಿದು ಬಂದು ಆಗಿಸೆನ್ನ ಈ ಜನ್ಮಕ್ಕೆ ನನ್ನ ಧನ್ಯನ
ನಾನೂ ಸಹ ಧರ್ಮ ಸೂಕ್ಷ್ಮವನರಿತಂತ ವಿಕರ್ಣ
ಶ್ರೇಷ್ಠವಿದು ಮಾನವ ಜನ್ಮ ಮುಂದಿನದನರಿಯೆ
ಅನಿಸುತಿಹುದು ನೀ ನಿಲ್ಲದೆ ಜೀವನ ಅಪೂರ್ಣ
ಕೃಷ್ಣಾ! ರಾಧೆಯಂತ ಸಂಬಂಧ ಇರಿಸೆ ಅಡ್ಡಿಯಿಲ್ಲ
ಕಣ್ತುಂಬಿಸಿ ಕೊಳ್ಳುವೆ ನನ್ನ ಬಾಳಲಿ ಸಂಪೂರ್ಣ
ಬಾಗೇಪಲ್ಲಿ