ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಸಿಹಿ ಗಾಳಿ

ಕಣ್ಣೆದಿರು ಸುಳಿದು ಹೋದ
ನಗುವೊಂದು ಮತ್ತೆ ಮತ್ತೆ ಕಾಡಿದೆ

ಹೇಳಿಯೂ ಹೇಳದೆ ಉಳಿದ
ಮಾತೊಂದು ಹಾಗೆಯೇ ಉಳಿದಿದೆ

ನಕ್ಕು ಹಗುರಾಗಬಹುದಾದ
ಭಾವವೊಂದು ಒಳಗೊಳಗೆ ಬಿಕ್ಕಿದೆ

ಕಣ್ಣಂಚಿನ ಬೆಳ್ಳನೆಯ ಮಿಂಚು
ಹೊಸ ಹೊಳಪು ನೀಡಿದೆ

ಮೌನದ ಮಾತೊಂದು ಎಡೆಬಿಡದೆ
ಮನವನ್ನು ತಟ್ಟಿದೆ

ಹೃದಯದ ತಂತಿಯ ಮೀಟಿ
ಹೊಸ ರಾಗವ ನುಡಿಸಿದೆ

ತಂಗಾಳಿ ಬೀಸಿ ಮನದಲ್ಲಿ
ಹೊಸ ಆಕಾಂಕ್ಷೆಗಳ ಮೀಟಿದೆ

ಹಿಂದಿಲ್ಲದ ಸವಿ ಕನಸುಗಳು
ಇಂದು ಮೊಗ್ಗಂತೆ ಅರಳಿದೆ

ಮಿಂಚಂತೆ ಮಿಂಚಿ ಕ್ಷಣ ಮಾತ್ರದಲ್ಲಿ
ಎಲ್ಲವೂ ಬದಲಾಗಿದೆ

ಇದ್ದಕ್ಕಿದ್ದಂತೆ ಕಂಬಳಿ ಹುಳವೊಂದು
ಹರಿದಾಡಿದಂತಾಗಿದೆ

ಕಚಗುಳಿ ಇಡುತ್ತ ಬದುಕಿನಲ್ಲಿ
ಹೊಸದಾದ ಸಿಹಿಗಾಳಿ ಬೀಸಿದೆ

One thought on “ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಸಿಹಿ ಗಾಳಿ

Leave a Reply

Back To Top