ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಒಪ್ಪವಿರದ ಬದುಕಿಗೆ
ನಿತ್ಯವೂ ಅಡಿಗಡಿಗೆ
ಕಳೆದು ಹೋದ ನಂಬಿಕೆಗೆ
ಭರವಸೆಗಳೆ ಹೂನಗೆ //
ಗಡಿಯ ಕಾಯೋ ಸೈನಿಕ
ಜಗತ್ತಿಗೆ ಧೀರನಾಯಕ
ಮಾಡುವ ಪ್ರತೀ ಕಾಯಕ
ಮನದಲೇನೋ ಪುಳಕ //
ಕಾಣದ ಚಿಂತೆಗಳ ಮೂಟೆ
ಮರದಲ್ಲಿರುವ ತೊಗಟೆ
ಉತ್ತರಿಸಲಾಗದ ಒಗಟೆ
ವೇದನೆಗೆ ಮಿತಿ ಉಂಟೆ //
ಕಾಯಕದಿಂದಿಳಿದ ಬೆವರು
ಹೊಳೆಯಲ್ಲಿರುವ ನೀರು
ಸಾಗರದ ಬಳಿಗೆ ಸರಿದರೂ
ಹುಟ್ಟುವುದಿಲ್ಲವೇ ಪೈರು//
ಬದುಕಿನ ಹುಟ್ಟು ನೆನಪಿರದು
ಸಾಗುವ ಪಯಣ ಗೊತ್ತಾಗದು
ನಂಬುವ ಕಾಯಕ ಹಿರಿದು
ತೇಲುವ ದೋಣಿ ದಡ ತಲುಪುವುದು //


About The Author

Leave a Reply

You cannot copy content of this page

Scroll to Top