ಡಾ ಶಶಿಕಾಂತ ಪಟ್ಟಣ ಪುಣೆ ಅವರ ಕವಿತೆ-ಉಳಿದು ಬಿಟ್ಟವು

ಗೆಳತಿ
ಉಳಿದು ಬಿಟ್ಟವು
ನನ್ನ ಮಾತುಗಳು
ನಿನ್ನ ಮೌನದ
ತಿಜೋರಿಯಲ್ಲಿ .

ಹಾಗೆ ಉಳಿದು ಬಿಟ್ಟವು
ಊರ ಹೊರಗಿನ
ಬಂಡೆಗಳ ಮೇಲಿನ
ನಮ್ಮ ಹೆಸರುಗಳು.

ಅನಾಥವಾದವು
ಮರದ ಕೆತ್ತನೆ
ಮೂಕವಾಯಿತು
ಕಟ್ಟಿದ ಗುಬ್ಬಿ ಗೂಡು.

ಕೊಚ್ಚಿ ಹೋಯಿತು
ಮರುಳ ಮೇಲಿನ ಕಾವ್ಯ
ಕಗ್ಗತ್ತಲಿನಲಿ
ಕನಲಿದವು ಭಾವಗಳು.

ಬಾಡಿದವು ಭರವಸೆಗಳು
ಕಮರಿದವು ಕನಸುಗಳು
ಸೋತ ಆಶಯಗಳು

ಉಳಿದವು ಭಾವ ಕವನಗಳಲ್ಲಿ


6 thoughts on “ಡಾ ಶಶಿಕಾಂತ ಪಟ್ಟಣ ಪುಣೆ ಅವರ ಕವಿತೆ-ಉಳಿದು ಬಿಟ್ಟವು

  1. ಕವನಗಳಲ್ಲೇ ಉಳಿದ ಭಾವಗಳನ್ನು ಅತ್ಯಂತ ಸರಳ- ಸುಂದರತೆಯಿಂದ ಅಭಿವ್ಯಕ್ತಿ ಮಾಡಿದ್ದೀರಿ

    ಸುಶಿ

  2. ಎಲ್ಲವೂ ಮನದಲ್ಲಿ
    ಅಚ್ಚಳಿಯದೆ ಉಳಿದಿವೆ.
    ಭಾವ……..
    ಅಕ್ಕಮ…

Leave a Reply

Back To Top