ರುದ್ರಾಗ್ನಿ ಅವರ ಕವಿತೆ-ಕಾಡು ಮಲ್ಲಿಗೆಯಂತವಳು

ಕಾಡು
ಮಲ್ಲಿಗೆಯಂತವಳು
ನಾನು…,
ನನ್ನವನು
ನನ್ನ
ಘಮಲಿಗೂ
ಕುಣಿಯುವವನು…

ನಮ್ಮಿಬ್ಬರ
ಉಕ್ಕುವ
ಪದಗಳ
ಉನ್ಮಾದಕ್ಕೆ
ನಾನು ಹೆಸರೇ
ಇಟ್ಟಿಲ್ಲ…

ಕೇಳುವ
ನೆಪದಲ್ಲಿ
ನನಗೊಂದು
ಬುಲಾವು ಕೊಟ್ಟು
ನಿನ್ನ ಖಾಸಗಿ
ಪ್ರಪಂಚಕೊಮ್ಮೆ
ಪರಿಚಯಿಸಿಬಿಡು…

ನಿನ್ನ ಅನುಪಸ್ಥಿತಿ
ಚಿರಪರಿಚಿತ
ನೋವಿಗೆ
ಮದ್ದೊಂದ
ಹುಡುಕಬೇಕಿದೆ
ಮುಗ್ದ ನೀನು ಕಣೋ…

ಮರಳು ಕಡಲು ಬಯಲು ಆಹ್..!!!

ಕೈ ಹಿಡಿದು ಅಲೆದಾಡಿಸು
ನಿನ್ನ ಹುಚ್ಚುತನದಲ್ಲಿ
ಕಳೆದುಹೋಗುವ
ಕಾಮ ಕಸ್ತೂರಿಯಂತೆ
ಔಷದಿಯೂ
ಹೌದು…!
ಔಪಚಾರ್ಯವೂ
ಹೌದು…!

ದಣಿದ ದೇಹ
ತಂಬೆಳಕಿನ
ನಿಶಬ್ದತೆಯಲಿ
ಒಡೆದು ಹೋಗಲಿ.
ನಿನ್ನದೆ ಮೂಲೆಯಲೆಲ್ಲೋ
ಕಡೆತನಕ ನನ್ನ
ಚೂರುಗಳೆಲ್ಲಾ
ಕವಿತೆಯ ಸಾಲುಗಳಾಗೆ
ಉಳಿದುಕೊಳ್ಳಲಿ…

ಆರ್ಕೆ ನಾ ನಿಮ್ಮ ಅಭಿಮಾನಿ


Leave a Reply

Back To Top