ಗಾಯತ್ರಿ ಎಸ್ ಕೆ ಅವರಕವಿತೆ-ಎಂಥ ಚಂದ..

ನೀ ಬಂದ ಹೊತ್ತು
ಕನಸೊಂದು ಬಿತ್ತು
ಹೊಂಗನಸ ಮುದವೇರಿ
ಅರಳಿದೆ ಮಾತಾಡಿದೆ

ಹರೆಯದ ಮನಸ್ಸು
ಎಷ್ಟೊಂದು ಸೊಗಸು
ಅರಳಿ ನಗುವ ಹೂವು
ಸಿಹಿಯಾದ ಮಾವು

ಎಂಥ ಚಂದದ ದಿನಗಳು
ಹೊಂಗನಸಿಗೆ ಕಾರಣವು
ಪ್ರೀತಿ ತೋರುವ ಹೃದಯವು
ನಿಷ್ಕಳಂಕ ಮನವು

ತಾವರೆ ಅರಳುವಂತೆ
ಕಮಲದ ಹೂವಿನಂತೆ
ಗುಲಾಬಿ ಎಸಳಿನಂತೆ
ಮೃದು ಮಧುರ ಭಾವ

ಅಕ್ಕರೆಯ ಸಕ್ಕರೆಯ
ನುಡಿಗಳು ಹಾಲ್ಜೇನಿನಂತೆ
ನಡೆಯಲ್ಲಿ ನವಿಲು
ಇಂಪಾದ ಧ್ವನಿಯ ಕೋಗಿಲೆ

ನೆನಪುಗಳ ಆಗರ
ಸವಿಯ ಸಾಗರ
ಕಡಲಂತೆ ಅಮರ
ಸಿಹಿಯದು ಮನಕೆ
ಮುದವದು….


One thought on “ಗಾಯತ್ರಿ ಎಸ್ ಕೆ ಅವರಕವಿತೆ-ಎಂಥ ಚಂದ..

Leave a Reply

Back To Top