ವಿದ್ಯಾಲೋಕೇಶ್ ಅವರ ಕವಿತೆ-ಯೌವ್ವನದ ಗುಂಗಿನಲಿ

ಯೌವ್ವನ ದ ಹಾದಿಯಲಿ
ತೋಚಿದ್ದೆಲ್ಲ ಬೇಕೆನಿಸುವ ಹಂಬಲ,
ಯಾವುದನ್ನು ಒಮ್ಮೆಗೆ ಒಪ್ಪಿಕೊಳ್ಳದ
ಮನಸಿನ ಚಂಚಲ.

ಕನ್ನಡಿಯ ಮುಂದೆ ನಿಂತರೆ ಸಾಕು,
ಹಚ್ಚಿದಷ್ಟೂ ಕಡಿಮೆ ಆಗುವ ಮುಖದ ಕಾಂತಿ.
ಅಮ್ಮನ ಬೈಗುಳದ ರಾಗ
ಕಿವಿಯೊಳಗೆ ಹೊಕ್ಕರು ತನ್ನದೇ
ಗುಂಗಿನ ಲೋಕ.

ಮನೆ ಕೆಲಸಗಳಲ್ಲಿ ಆಸಕ್ತಿ ಇಲ್ಲ,
ತಿರುಗಾಟದ ಮೇಲೆಯೇ ಗಮನವೆಲ್ಲ.
ಅದಕ್ಕೆ ಮನೆಯವರ ಒಪ್ಪಿಗೆ ಇಲ್ಲ..
ಒಂದೇ ಮಾತು ನೀನಿನ್ನೂ ಮಗುವಲ್ಲ.

ಹದಿ ಹರೆಯದ ಪ್ರಾಯ,
ಕೇಳೀತೇ ಹೇಳಿ ಒಳ್ಳೆಯ ನುಡಿಯ.
ಸುತ್ತುವುದು ಪ್ರೀತಿ ಪ್ರೇಮ ಪ್ರಣಯ,
ಕೊನೆಗೆ ಪಡುವುದು ವ್ಯಥೆಯ.

ಹರೆಯ ಕಳೆದೇ ಹೋಯಿತು,
ಮದುವೆಯು ನಡೆದೇ ಬಿಟ್ಟಿತು
ಲೆಕ್ಕವಿಲ್ಲದಷ್ಟು ಬೈಗುಳಗಳ
ನೆನಪುಗಳಷ್ಟೇ ಅಲ್ಲದೆ
ಬೇರಾವ ಸಾಧನೆಯು ಇಲ್ಲ
ಇನ್ನು ಚಿಂತಿಸಿ ಫಲವಿಲ್ಲ.


16 thoughts on “ವಿದ್ಯಾಲೋಕೇಶ್ ಅವರ ಕವಿತೆ-ಯೌವ್ವನದ ಗುಂಗಿನಲಿ

Leave a Reply

Back To Top