ಸರಿತ.ಹೆಚ್ (ಕಾಡು ಮಲ್ಲಿಗೆ) ಅವರ ಕವಿತೆ-ನಮ್ಮವರ ಮೋಸಕ್ಕೆ…

ತಂದು ಎಳೆಯುವರು …
ನಾವು ಹೋಗುವ ದಾರಿಗೆ …
ಕಷ್ಟಗಳ ಸರಮಾಲೆ …

ನಮ್ಮವರು ಎಂಬುವವರು …!
ನಮಗೆ ತಿಳಿಯದಂತೆ …!

ನಿರಾಳವಾಗಿ ಹುಸಿಮನಸಿನೊಳಗೆ ಖುಷಿಯಾಗಿ…
ಇರುವರು ನಮ್ಮೊಳಗೆ …
ನಮಗೆ ತಿಳಿದಿಲ್ಲವೆಂದು .. ?

ಕೆಡುಕು ಮಾಡುವುದರೊಳಗೆ
ನಡೆದು ನಡೆದು …
ಅವರ ಜೀವನವನ್ನು
ಮರೆತು ಮಂಕಾಗಿರುವವರು …

ಸಮಯ ಕಳೆದುಕೊಂಡು
ಅನ್ಯರಿಗೆ ಬಗೆದ
ದ್ರೋಹದ ನೆರಳಿನಂತೆ …..

ಅವರ ಜೀವನಕ್ಕೆ
ಆವರಿಸಿರುವುದು…
ಸಿಡಿಲು ಬಡಿದಂತೆ .

ಸುಮ್ಮನೆ…
ಕಾಲೆಳೆಯುವರು…

ಇಂಥವರಿಗೆ ಆಸರೆಯಾಗಿ
ನಿಲ್ಲಲು ಅಂಜುತ್ತಿರುವನು ದೇವರು…


One thought on “ಸರಿತ.ಹೆಚ್ (ಕಾಡು ಮಲ್ಲಿಗೆ) ಅವರ ಕವಿತೆ-ನಮ್ಮವರ ಮೋಸಕ್ಕೆ…

Leave a Reply

Back To Top