ಸವಿತಾ ದೇಶಮುಖ ಅವರ ಕವಿತೆ-ಸಂತೆಯೊಳಗಣ

ಲೋಕದ ಸಂತೆಯಲಿ
ಮಾಯೆಯ ಮಡುವಿನಲಿ
ತಿರು ತಿರುಗಿ ಮರಗುವ
ಮುನ್ನ ಎಚ್ಚೆತ್ತು…..
ಬಿಸುಡಾಚೆ ಚಿಂತೆಯ ಹೊರೆ
ನಡೆ ಮುನ್ನ ಸುಜ್ಞಾನದ
ಸು ಸಂಸ್ಕೃತಿಯಲಿ…

ತಂದೆ ತಾಯಿಯ- ಮಮತೆ,
ಹೆಂಡರ ಮಕ್ಕಳ- ಪ್ರೀತಿ,
ದಾಯಾದಿಗಳ -ಒಡನಾಟ,
ಬೀಗರ ಬೀಗುಮಾನದ -ಬಂಧ
ಉಕ್ಕಿರುವ ಭಾವ ಬಿಂದುಗೆ….
ಎಲ್ಲಕ್ಕೂ ಬೆಲೆ ಕಟ್ಟಿ
ಪಡೆಕೋ..ಈ ಸಂತೆಯಲ್ಲಿ….

ಮಮತೆಗೆ- ಮಮಕಾರದ ಬೆಲೆ
ಪ್ರೀತಿಗೆ -ಪ್ರೇಮದ ಬೆಲೆ
ನಿಸ್ಸಿಂಮ ಗೆಳೆತನಕ್ಕೆ-
ನಂಬಿಕೆಯ ಬೆಲೆ
ಸಂಬಂಧಿಕರಿಗೆ-
ವಿಶ್ವಾಸದ ಬೆಲೆ ಕಟ್ಟಿದಾಗ..ಲೋಕದ ಸಂತೆಯಲಿ ಸರ್ಧಮಿ ವ್ಯಾಪಾರಿಯಾಗಿ
ನೀ ಮಿಂಚುವೆ..
ಸೂರ್ಯಚಂದ್ರನ ಬೆಳಕಿನಂತೆ….
ಸಂಬಂಧಗಳ ಹಾವು ಏಣಿಯ
ಆಟದಲಿ……


One thought on “ಸವಿತಾ ದೇಶಮುಖ ಅವರ ಕವಿತೆ-ಸಂತೆಯೊಳಗಣ

Leave a Reply

Back To Top