ಮಾಲಾ ಹೆಗಡೆಅವರ ಕವಿತೆ-ಆತ್ಮವಿಶ್ವಾಸ

ದಿಟ್ಟ ತನದಿ ಸೋಲನೊಮ್ಮೆ
ಮೆಟ್ಟಿ ನಿಂತು ಮುಂದೆ ಸಾಗು;
ನದಿಯು ಬಂಡೆಯನಡಿಯಮಾಡಿ
ಮೇಲೇರಿ ಹರಿಯುವಂತೆ.

ದೇವಶಿಲ್ಪಿ ಕೊಟ್ಟ ಏಟ
ಸಹಿಸುತಲೇ ನೀ ಸಾಧಕನಾಗು;
ಉಳಿಯ ಪೆಟ್ಟು ತಿಂದು
ಶಿಲೆಯು, ಶಿಲ್ಪವಾಗಿ ಮೆರೆಯುವಂತೆ.

ಹುಚ್ಚು ಜನರ ಚುಚ್ಚು ಮಾತ
ಹಚ್ಚಿಕೊಳದೇ ಉಚ್ಛನಾಗು;
ಕೊಚ್ಚಿ ಕಡಿಯುತಲಿದ್ದರೂನೂ,
ಚಿಗುರಿ ನಿಲುವ ಮರಗಳಂತೆ.

ದುಗುಡವಳಿಸಿ ಧೀರನಾಗಿ
ಆತ್ಮಸ್ಥೈರ್ಯದಿಂದ ಬೀಗು;
ದಿನವು ಮಳುಗುತಲಿದ್ದರೂನು,
ಮತ್ತೆ ಬೆಳಗೋ ಸೂರ್ಯಂನಂತೆ.

ನಿನ್ನ ಶಕ್ತಿ ಮಾತ್ರ ನಂಬಿ
ಆತ್ಮಬಲದಿ ಮುಂದೆ ನುಗ್ಗು;
ಕೆಡವೊ ಕೈಯ ನಡುವೆಯೂ ಜೇಡ,
ಛಲದಿ ಬಲೆಯ ಹೆಣೆಯುವಂತೆ.

ಕಷ್ಟ ಕಳೆದು, ಇಷ್ಟ ಜನರ
ಆಶುಜ್ಯೋತಿಯಾಗಿ ಬೆಳಗು;
ತನ್ನ ತಾನೇ ಸುಟ್ಟು ಸುತ್ತ,
ಬೆಳಕ ನೀಡೋ ಬತ್ತಿಯಂತೆ.


6 thoughts on “ಮಾಲಾ ಹೆಗಡೆಅವರ ಕವಿತೆ-ಆತ್ಮವಿಶ್ವಾಸ

Leave a Reply

Back To Top