ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
ಹಸಿರು.. ಉಸಿರು..
ಹಸಿರು ತುಂಬಿರಲು ಇಳೆ
ಸುರಿವುದು ಧಾರಕರದಿ ಮಳೆ
ತುಂಬಿ ಹರಿವುದು ಹೊಳೆ
ತೊಳೆಯುವುದು ಜಗದ ಕೊಳೆ
ಉತ್ತಿ ಬಿತ್ತುವನು ರೈತ
ಹೊಲದ ತುಂಬ ಹಸಿರು
ನಾಡಿಗೆ ಹೊಸ ಉಸಿರು
ಬೆಳೆ ಚೆನ್ನಾಗಿ ಬೆಳೆದು ಬರುವುದು
ಒಳ್ಳೆಯ ಫಸಲು
ರೈತನ ಮುಖದಿ ಮೂಡುವುದು
ಮಂದಹಾಸ
ಸಮೃದ್ಧ ಬೆಳೆ ನೀಗುವುದು
ಜಗದ ಹಸಿವು
ನಕ್ಕು ನಲಿಯುವುದು ಜಗವು
ಉದ್ಯೋಗ ಸಿಗುವುದು ಹಲವು
ಜನರ ಕಷ್ಟವು ನೀಗುವುದು
ಸಮೃದ್ಧ ಜೀವನ ನಮ್ಮದಾಗುವುದು
ಹಸಿರ ಪರಿಸರವ ಉಳಿಸೋಣ
ಗಿಡ ಮರಗಳ ಸುತ್ತಲೂ ಬೆಳೆಸೋಣ
ನಮ್ಮ ಭವಿಷ್ಯವನ್ನು ಚಂದವಾಗಿ ರೂಪಿಸೋಣ
ನೆಮ್ಮದಿಯ ನಾಳೆಗಳ ನಮ್ಮದಾಗಿಸಿ ನಿರ್ಮಿಸೋಣ
ಹಸಿರು ಉಳಿಸುವ ಮೂಲಕ ನಮ್ಮನ್ನ
ನಾವು ರಕ್ಷಿಸಿಕೊಳ್ಳೋಣ
ನಾಗರಾಜ ಜಿ. ಎನ್. ಬಾಡ