ಪರಿಸರ ಮಾಲಿನ್ಯ ಮತ್ತು ಪ್ರತಿಬಂಧಕೋಪಾಯಗಳು. ಸಿದ್ಧಾರ್ಥ ಟಿ ಮಿತ್ರಾ

ಜೂನ್‌ 5 ರಂದು ವಿಶ್ವಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನವು ವಿಶ್ವಾದ್ಯಂತ ಪರಿಸರದ ಬಗ್ಗೆ ಜಾಗೃತಿ ಮತ್ತು ನಮ್ಮ ಪರಿಸರದ ರಕ್ಷಣೆಗೆ ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪರಿಸರದ ಸಮೃದ್ಧಿ ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ತಿತ್ವಕ್ಕೆ ಕಾರಣವಾಗಿದೆ.  
ಮಾನವ ಇತರೆ ಪ್ರಾಣಿ, ಪಕ್ಷಿಗಳು, ಸೇರಿದಂತೆ ಪ್ರತಿಯೊಂದು ಜೀವ ಸಂಕುಲ ಆಹಾರ, ಗಾಳಿ, ನೀರು ಇತರೆ ಅಗತ್ಯತೆಗಳಿಗಾಗಿ ಪರಿಸರವನ್ನ ಅವಲಂಭಿಸಿದೆ ಎಂದರೆ ತಪ್ಪಾಗಲಾರದು. ಆದರೆ ಇತ್ತಿಚಿನ ದಿನಗಳಲ್ಲಿ ಮಾನವನು ಆಧುನಿಕ ಬದುಕಿನ ಗೀಳಿಗೆ ಬಿದ್ದು ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಈಗ ಮಾನವನ ಈ ದುರಾಸೆಯಿಂದ ಉತ್ತಮ ಪರಿಸರದ ಜೊತೆಗೆ ಗಾಳಿ, ನೀರು, ಮಣ್ಣು ಮುಂತಾದ ಪರಿಸರದ ಪ್ರತಿಯೊಂದು ಅಂಶವೂ ಕಲುಷಿತಗೊಂಡಿದೆ. ಮನುಷ್ಯ ತನ್ನ ಅಭಿವೃದ್ಧಿಗಾಗಿ ತನಗೆ ಅರಿವಿಲ್ಲದಂತೆ ಪರಿಸರವನ್ನು ಹಾಳು ಮಾಡುತ್ತಿದ್ದಾನೆ.
   ಹೀಗಾಗಿ ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ಪ್ರತಿವರ್ಷ ಜೂನ್‌ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಬೇರೆ ಬೇರೆ ಧ್ಯೇಯವಾಕ್ಯದೊಂದಿಗೆ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಪರಿಸರದ ಬಗ್ಗೆ ಪ್ರತಿ ಮನುಷ್ಯನಲ್ಲೂ ಜಾಗೃತಿ ಮೂಡಿಸುವುದು ಮತ್ತು ಪರಿಸರವನ್ನು ಹಾಳು ಮಾಡುವುದನ್ನ ತಡೆಯುವುದಾಗಿದೆ.
ನಾವು ವಾಸಿಸುತ್ತಿರುವ ಭೂಮಿಯ ಸುತ್ತಲೂ ಎಲ್ಲ ಜೀವಿಗಳ ಜೀವ ರಕ್ಷಣೆ ಮಾಡುವ ವಾಯುವಿನ (ಗಾಳಿ) ಒಂದು ಪದರವಿದೆ ಇದರ ನಂತರ ಬರುವುದು ನೀರಿನ ಪಾತ್ರ.ಇವೆರಡೂ ಜೀವಿಗಳಿಗೆ ಜೀವಿಸಲು ಅತ್ಯವಶ್ಯಕ ಇದರಲ್ಲಿದೆ, ಭೂಮಿಯಲ್ಲಿರುವ ಪೋಷಕಾಂಶಗಳನ್ನು ಹೀರಿಕೊಂಡು ಸಸ್ಯಗಳು,ಗಿಡ ಮರಗಳು ಬೆಳೆಯುತ್ತವೆ.ಈ ಎರಡು ಮೂಲಭೂತ ದ್ರವ್ಯಗಳು,ಗಾಳಿ ನೀರು,ಉಳಿದ ಗ್ರಹಗಳಲ್ಲಿ ಇಲ್ಲವಾದ ಕಾರಣ ಇಲ್ಲಿ ಜೀವಿಗಳಲ್ಲವೆಂದು ಸ್ಥರಪಟ್ಟಿದೆ.ಭೂಮಿಯ ಸುತ್ತ ವಾಯುಮಂಡಲ, ಜಲಸಂಪನ್ಮೂಲ ಮತ್ತು ನೈಸರ್ಗಿಕವಾಗಿ ಬೆಳೆದ ಕಾಡು,ಮೇಡು ಇವುಗಳಿಗೆ ಪರಿಹಾರವೆಂದು ಕರೆಯುತ್ತೇವೆ.
ಪ್ರಾರಂಭದಲ್ಲಿ ಈ ಪರಿಸರವನ್ನವಲಂಬಿಸಿದ ಜೀವೀಗಳ ಸಂಖ್ಯೆ ನಗಣ್ಯವಾಗಿತ್ತು . ಹೀಗಾಗಿ ಮಾಲಿನ್ಯ ಎಂಬ ಪದಪ್ರಯೋಗವೇ ಇರಲಿಲ್ಲವೆಂದರೂ ನಡೆಯುತ್ತದೆ.ಜನಸಂಖ್ಯೆ ಬೆಳೆದಂತೆಲ್ಲ ಪರಿಸರದ ಮೇಲೆ ಒತ್ತಡ ಅಧಿಕವಾಗುತ್ತ ನಡೆಯುತ್ತಿದೆ.ಬೆಳೆಯುತ್ತಿರುವ ಜನಸಂಖ್ಯೆಗೆ ವಸತಿ ಸೌಲಭ್ಯ ಒದಗಿಸಲು ಕಾಡನ್ನು ಕುಡಿಯುವುದು ಅನಿವಾರ್ಯವಾದದ್ದೇನೋ ನಿಜ.ಆದರೆ ಆ ನೆಪದಲ್ಲಿ ಬೆಲೆಯುಳ್ಳ ಕಟ್ಟಿಗೆಯ ಕಳ್ಳ ಸಾಗಣಿಕೆಗೆ ಇಂಬು ದೊರೆಯಿತು.ಆದರ ಪರಿಣಾಮವಾಗಿ ವಿವೇಚನೆ ಇಲ್ಲದೆ ಕಾಡಿನ ನಾಶ ನಡೆದಿದೆ.ಇದರ ದುಷ್ಪರಿಣಾಮಗಳು ಹಲವಾರು ರೀತಿಯಲ್ಲಿ ಆಗಿವೆ.ತಮ್ಮ ಉಳಿವಿಗಾಗಿ ಕಾಡನ್ನು ಅವಲಂಬಿಸಿದ್ದ ಕೆಲ ಜಾತಿಯ ಪಶು ಪಕ್ಷಿಗಳು ವಿನಾಶದ ಅಂಚಿಗೆ ಬಂದು ತಲುಪಿದೆ.ತಮಗಿದ್ದ ನೆಲೆ ತಪ್ಪಿದ ನಂತರ ಕೆಲ ಕಾಡುಪ್ರಾಣಿಗಳು ಕಾಡನ್ನು ತೊರೆದು ನಾಡಿನೊಳಕ್ಕೆ ನುಗ್ಗಿವೆ.
ನಿತ್ಯ ಹರಿದ್ವರ್ಣ ಕಾಡಿಗೂ ಸಮೃದ್ಧ  ಮಳೆಗೂ ಗಾಢ ಸಂಬಂಧ ಉಂಟು.ವಿವೇಚನಾರಹಿತ ಕಾಡಿನ ನಾಶದಿಂದ ಮಳೆಗಾಲ ಅನಿಶ್ಚಿತವಾಗಿದೆ ಕಾಡಿನ ನಾಶದಿಂದ,ಬಂಜರು ಪ್ರದೇಶ ಹೆಚ್ಚಾಗಿ ಪರಿಸರದ ಸಮತೋಲನ ತಪ್ಪಿ ಒಂದೋ ಅತಿವೃಷ್ಟಿಯಾಗುತ್ತದೆ.ಇಲ್ಲವೇ ಮಳೆಯೇ ಆಗುವುದಿಲ್ಲ.ಇತ್ತೆಚಿಗಂತೂ ಇದರ ಅನುಭವ ಎಲ್ಲರಿಗೂ ಆಗಿದೆ.
ಬೆಳೆಯುತ್ತಿರುವ ಜನಸಂಖ್ಯೆಗೆ ವಸ್ತುಗಳನ್ನು ಅನೇಕ ಕಾರ್ಖಾನೆಗಳು ತೆಲೆಎತ್ತಿವೆ ಈ ಕಾರ್ಖಾನೆಗಳು ಉಗುಳುವ ವಿಷಾನಿಲಗಳು ಗಾಳಿಯಲ್ಲಿ ಸೇರಿ ಮತ್ತು ಅವುಗಳ ತಾಜ್ಯ ವಸ್ತುಗಳು ಕೆರೆಗಳು .ನದಿ ತೊರೆಗಳನ್ನು ಸೇರಿ ವಿವಿಧ ರೀತಿಯಲ್ಲಿ ಮಾಲಿನ್ಯ ಉಂಟು ಮಾಡಿವೆ . ಪರಿಣಾಮವಾಗಿ ಮಾನವ ಹೇಳಲಾರದಷ್ಟು ರೋಗ ರುಜಿನಗಳಿಂದ ಬಳಲುತ್ತಿದ್ದಾನೆ.   ಇವೆಲ್ಲದರ ಜೊತೆಗೆ ಶಬ್ದ ಮಾಲಿನ್ಯ ಸೇರಿ ಮಾನವನ ಶ್ರವಣ ಶಕ್ತಿಯ ಮೇಲೆ ವಿಪರೀತ ಪರಿಣಾಮ ಬೀರಿ ಕಿವುಡುತನ ಹೆಚ್ಚಾಗುತ್ತದೆ.  
ಆದ್ದರಿಂದ ಇವೆಲ್ಲ ಅಂಶಗಳನ್ನು ಗಮನಿಸಿ ಇರುವ ಕಾಡನ್ನು ಉಳಿಸಿಕೊಳ್ಳಬೇಕು ಆದರ ಜೊತೆಗೆ ಸಾಮಾಜಿಕ ಅರಣ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕು.ಈ ಕ್ರಮದಿಂದ ಮಳೆ ಬೆಳೆ ಸರಿಯಾಗಿ ಆಗುತ್ತದೆ . ಮತ್ತು ಗಾಳಿಯಲ್ಲಿ ಬೆರೆಯತ್ತಿರುವ ಕಾರ್ಬನ್, ಡೈಆಕ್ಸೈಡ್ ಮುಂತಾದ ಕಲ್ಮಶಗಳನ್ನು ಗಿಡ ಮರಗಳನ್ನು ಹೀರಿಕೊಂಡು ಮಾನವನಿಗೆ ಉಸಿರಾಡಲು ಶುದ್ದ ಹವೆ ದೊರೆತು ನೀರು ಮತ್ತು ಗಾಳಿಯಿಂದ ಉದ್ಭವಿಸುವ ಎಷ್ಟೋ ರೋಗ ರುಜಿನಗಳು ಹತೋಟಿಗೆ ಬಂದು ಮಾನವನ  ಜೀವನ ಆಹ್ಲಾದಕರವಾಗುತ್ತದೆ ಮೇಲಿನ ಪರಿಹಾರವೊಂದೆ ಸಮಸ್ಯೆಗೆ ಉತ್ತರ ನೀಡಲಾರದು. ಪರಿಸರ ಮಾಲಿನ್ಯ ಮತ್ತು ಪ್ರತಿಬಂಧಕೋಪಾಯಗಳು. ಸಿದ್ಧಾರ್ಥ ಟಿ ಮಿತ್ರಾ


Leave a Reply

Back To Top