ಕಾವ್ಯ ಸಂಗಾತಿ
ಕುಮಾರ ಚಲವಾದಿ ಹಾಸನ
ಸಗ್ಗದ ಸುಖ!

ಕವನ ಬರೆಯಲೇನು ಗೆಳತಿ
ನಿನ್ನ ಸವಿಯ ನೆನಪಲಿ
ಅಂದ ರೂಪ ವಯ್ಯಾರ ಒನಪು
ಕಾಡುತಿಹುದು ಎದೆಗಡಲಲಿ
ಮನದ ಅಳಲು ನೀಗಲೆಂದು
ಭುಜವ ನೀಡು ಚೆಲುವೆಯೇ
ಒರಗಿ ಅಲ್ಲಿ ಕೆಲವು ಸಮಯ
ಸುಮದ ಗಂಧ ಹೀರುವೆ
ಬಿಳಿಯ ಮೈಯ ಘಮಲಿನಲ್ಲಿ
ನೂರು ನೋವ ಮರೆವೆ ಪ್ರಿಯೆ
ಸಗ್ಗ ಸುಖವೆ ಏಕೆ ಬೇಕು
ಹೆಣ್ಣು ತಾನೇ ಜಗದ ಮಾಯೆ
ಕುಮಾರ ಚಲವಾದಿ ಹಾಸನ





1 thought on “ಕುಮಾರ ಚಲವಾದಿ ಹಾಸನ ಕವಿತೆ-ಸಗ್ಗದ ಸುಖ!”