ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
ಈ ಮರ
ಮರ ಮರ ಮರನೆ ಮರುಗಿದೆ ಈ ಮರ
ಧರೆ ಕಾಯುವ ತಂಪು ನೆಳಲ ಈ ಮರ
ಉರುಳಿದ ನರಳಿದ ತನ್ನ ಕಥೆಯ
ಹೇಳುತಿಹುದು ತನ್ನ ವ್ಯಥೆಯ
ಮಾತಿನಲಿ ಎಚ್ಚರಿಕೆಯಿಹುದು
ಈಗ ನನ್ನ ಪಾಳಿಯಿಹುದು
ನಾಳೆ ನಿನ್ನ ಅಳಿವಿಹುದು
ಬರೆದಿಟ್ಟುಕೋ ಮಾನವ..!!
ಭೂಮಿ ತಾಪ ಹೆಚ್ಚಬಹುದು
ಉಸಿರಿಗಾಗಿ ಪರಿತಪಿಸಬಹುದು
ಆಗ ನನ್ನ ನೆನೆಯುವೆ ನೀನು
ಇದ ತಿಳಿಯೆ ಮಾನವ..!!
ಸ್ವಾರ್ಥದಲಿ ಕುರುಡಾದ ನೀನು
ನನ್ನ ನಾಶ ಮಾಡುತಿರುವೆ
ಕೊಯ್ದ ಮೂಗು ಮತ್ತೆ ಬರದು
ಇದನರಿತುಕೋ ಮಾನವ..!!
ಅನಸೂಯ ಜಹಗೀರದಾರ