ಕಾವ್ಯ ಸಂಗಾತಿ
ಮಾಲಾ ಹೆಗಡೆ
ಮೊದಲ ಮಳೆ
[10:52 am, 04/06/2024] Mala hegde.: ಉದಯನ ತಾಪದ ಉರಿ ದಿಗಿಲು
ಬಡಿಸಿತ್ತು,
ಭೂ ಒಡಲ ಜಲ ಬರಿದಾಗಿ ಬೆದರಿ
ಬಾಯಾರಿತ್ತು.
ಮೇಘಗಲೆಲ್ಲ ಒಟ್ಟಾಗಿ ಒಮ್ಮೆ ಸೃಷ್ಟಿಗೆ
ವೃಷ್ಟಿ ತರಿಸಿತು.
ಧರೆಯ ಧಗೆ ತಣಿದೆಲ್ಲೆಡೆ ಧೂಳ ಘಮ ಹರಡಿತು.
ಇಳೆಗಾಯ್ತು ಈ ದಿನ ಆ
ವರುಣನ ಆಗಮನ,
ಪುಳಕಗೊಂಡಿತು ಜೀವ ಸಂಕುಲದ ಮೈ ಮನ.
ಪುಟ್ಟ ಕಂದಮ್ಮರು ನೆನೆಯುತ ನಲಿಯುವುದೇ ಚೆನ್ನ,
ಎಲ್ಲೆಲ್ಲೂ ಸಂಭ್ರಮವೇ ಮೊದಲ ಮಳೆಯ ಹನಿ ಸಿಂಚನ.
ಧರೆಯ ಚುಂಬಿಸಿದೆ ನವ
ವರ್ಷಧಾರೆ,
ಭೂರಮೆಯು ಉಡಲು ಸಿದ್ಧ
ಹಸಿರ ಸೀರೆ.
ತರುಲತೆಗಳೆಲ್ಲವಕ್ಕೂ ಜೀವ
ಜಲ ಮಳೆ ನೀರೇ,
ವಸುಂಧರೆಯ ಒಡಲಿಗೆ
ತಂಪೆರೆದ ಮುಂಗಾರೇ.
ಮಾಲಾ ಹೆಗಡೆ.
Very nice
Superb