ಕಾವ್ಯ ಸಂಗಾತಿ
ಮನ್ಸೂರ್ ಮುಲ್ಕಿ
ಗುಟುಕು ನೀರು
ನೀ ನನಗೆ ಇಷ್ಟವಾಗಿ
ಮಾತೆಲ್ಲ ಹಿತವಾಗಿದೆ
ಭಾವನೆ ಜೊತೆಯಾಗಿ
ನಿನ್ನೊಡನಾಟ ಆನಂದವಾಗಿದೆ
ನನ್ನ ಪ್ರೀತಿಗೆ ನಿನ್ನ ಪ್ರೇಮವು
ಹಗಲು ಇರುಳು ಸೆರೆಯಾಗಿದೆ
ನಿನ್ನ ನೋಟಕೆ ನಾ ಬಂದಿಯು
ನಗುವಿನಲ್ಲಿ ನಾ ತೇಲಾಡಿದೆ
ನಿನಗ್ಯಾತಕೋ ನಾ ಮರುಳಾದೆನು
ನಿನ್ನ ನಡೆಯು ನನ್ನ ನುಡಿಯು ಜೊತೆಯಾಗಿದೆ
ಮರುಳುಗಾಡು ಬಿಸಿಯಾಗಿದೆ
ಅದೆಷ್ಟೋ ಮೈಲಿ ನಿನ್ನ ನೆರಳೇ ಬೇಕಾಗಿದೆ
ಅರುಳೋ ಹೂವು ಮತ್ತೆ ಮುದುಡದಂತೆ
ವರುಣನೇ ನೀನು ಕರುಣೆ ತೋರು
ಸಾಯೋ ಮುನ್ನ ಬೇಕು ನನಗೆ
ನಿನ್ನಿಂದಲೇ ಪ್ರೀತಿಯ ಗುಟುಕು ನೀಡು
ಮನ್ಸೂರ್ ಮುಲ್ಕಿ