ಶಿವಮ್ಮ ಎಸ್ ಜಿ ಕೊಪ್ಪಳ ಕವಿತೆ-ನಾ ಕಾಣೆ:—–

ಒಡಲ ಬೇಗೆಯಳಿವ ಬಗೆಯದೆಂತು ಕಾಣೆ
ಕರುಳ ಬಳ್ಳಿಯ ಒಲವ ಧಾರೆಯಪರಿನಾಕಾಣೆ.
ಸುತ್ತಿರುವಕತ್ತಲುಹರಿವ
ಪರದೆಯ ನಾ ಕಾಣೆ.

ಈ ಜಗದ ನಿಯಮಕೆ
ಪ್ರತಿ ನಿಯಮ ಕಾಣೆ.
ಬಾಳ ಓಟದಲಿ ಪರ
ದಾಟದ ಗತಿಯ ಕಾಣೆ
ಜೀವನದ ಸಾಗರವ ಈಜುವ ನಿಯತಿ ಕಾಣೆ.

ಒಳ್ಳೆಯದನ್ನೇಆರಿಸುವ
ಛಲವೆಲ್ಲೋ ನಾಕಾಣೆ.
ಮಾನವಂತರಬದುಕೆಲ್ಲ
ಸೊಗವಾಗುವದ ಕಾಣೆ.
ಶ್ರಮಿಕರ ಶ್ರಮದ ಫಲ
ಒಲವಾಗುವದನುಕಾಣೆ

ಸರಿದಾರಿಯಸವೆಸಿಸಿರಿ
ವಂತರಾದುದನಾಕಾಣೆ.
ದಿಟವನ್ನೇನುಡಿಯುವ
ವರ ಕೊಂಚವೂ ಕಾಣೆ.
ಸಟೆಯಬಿಟ್ಟುಬದುಕು
ವವರ ನಾನೆಲ್ಲೂ ಕಾಣೆ.

ಅಡುಗೆಯಲ್ಲಿಯಾವ
ರುಚಿಯನು ನಾ ಕಾಣೆ.
ಕೆಲಸದಲ್ಲೂ ಶುಚಿಯ
ಎಲ್ಲಿಯೂ ನಾ ಕಾಣೆ.
ನಡೆಯಲ್ಲೂ ಹಿತವನ್ನು
ಎಲ್ಲಿಯೂ ನಾ ಕಾಣೆ.

ಎಲ್ಲರಲ್ಲೂಸದಾನಿಜದ
ನಡೆಯತಪ್ಪಿಯೂಕಾಣೆ
ಸರ್ವರನೂ ಸಲಹುವ
ದೈವದನೆನಹನಾ ಕಾಣೆ.
ಸಮಾಜಮುಖಿಕಾಯಕವ
ಹುಡುಕಿದರೂಕಾಣೆ

ಸರ್ವರ ಸುಖದಲ್ಲಿ ಸಹ
ಆರೋಗ್ಯ ಭಾಗ್ಯಕಾಣೆ.
ಸರ್ವರಸಂಗದಲಿಪ್ರೀತಿ
ವಿಶ್ವಾಸ ಇನಿತೂಕಾಣೆ.
ಜಗದಲಿ ಸತ್ಯಂ ಶಿವಂ
ಸುಂದರಎಂಬುದಕಾಣೆ

ಹೀಗೆ ಸದಾಹುಡುಕುವ
ಜೀವನದ ಗಮ್ಯ ಕಾಣೆ.
ಸದಾನೆನೆಯುವ ಬಾಳ
ಓಟದಗುರಿಯ ಕಾಣೆ.
ಶಾಶ್ವತ ಸುಖಶಾಂತಿಯ
ತುಡಿತ ಹುಡುಕಿ ಕಾಣೆ.

ನಿತ್ಯ ಸತ್ಯ ಸಂಸ್ಕೃತಿಯ
ಉಳಿವುನಾನೆಲ್ಲೂಕಾಣೆ
ಒಟ್ಟಿನಲ್ಲಿಓಡುವಜಗದ
ಮಾಯೆಯಸುಳಿಯಲ್ಲಿ
ಸಿಲುಕಿ ಮೇಲೆ ಬರುವ
ಪರಿಯದೆಂತುನಾಕಾಣೆ


Leave a Reply

Back To Top