ಕಾವ್ಯಸಂಗಾತಿ
ಭಾರತಿ ರವೀಂದ್ರ
ಹಾಯ್ಕುಗಳು
1)
ನೋವು ಶಮನ
ಮಡಿಲ ಮಗು ನಕ್ಕು
ನಲಿದಾಗೆಲ್ಲ.
2)
ನೆನಪುಗಳು
ಬಾಳ ಪಯಣ ದಲ್ಲಿ
ತೀರದ ಬುತ್ತಿ
3)
ಗಾಳಿಯು ಮೌನ
ಅವಳ ಮುಂಗುರುಳು
ಕೆನ್ನೆ ಸೊಕಲು.
4)
ಬಾಳು ಬಂಗಾರ
ತೃಪ್ತಿ ತುಂಬಿದ ಮನ
ಜೊತೆ ಇರಲು
5)
ನಿನ್ನ ನೆನಪು
ಸುರಿದ ಮಳೆ,ಮನ
ಮೈ ತಂಪಾಯಿತು
6)
ಇಳೆ ಮಳೆಯ
ನಂಟು,ಅನವರತ
ಪ್ರಕೃತಿ ಗಾನ
7)
ಬಿಸಿಲು ಮಳೆ
ಸೃಷ್ಟಿ ನಿಯಮ,ಏನೋ
ಮನುಜ ಗುಣ
8)
ಸೋನೆ ಸುರಿದ
ವೇಳೆ,ನೆನಪುಗಳ
ಕಾಟ ಅದೇಕೋ?
9)
ನಿರೂಪ ಏಕೆ?
ಕಣ್ಣ ಸನ್ನೆ ಯು ಸಾಕು
ನಲ್ಲ ನಾ ಸೋತೆ
10)
ಕಂದ ಜನನ
ಹೆಣ್ಣು ಬಾಳಿಗೆ ಸಿಕ್ಕ
ಮರು ಜನುಮ
ಭಾರತಿ ರವೀಂದ್ರ
ಅಹ್ಮದಾಬಾದ್