ಕಾವ್ಯ ಸಂಗಾತಿ
ಭಾರತಿ ಅಶೋಕ್
‘ಬಯಲ ಬಂಧನ’
ಸದಾ
ಒಳಗನ್ನೇ ಧ್ಯಾನಿಸುವ ನನಗೆ
ನಿನ್ಹೊರಗಿನ ಕುರಿತು
ಹೇಳೆಂದರೆ ಏನು ತಾನೆ ಹೇಳಿಲಿ
ಹೊರಗನ್ನು ಪ್ರೀತಿಸುವವನಿಗೆ
ಒಳಗೆಂದರೆ ಬಂಧನ
ನನಗದೇ ಬಯಲು
ಸದಾ ಬಯಲಾಗುವ ನನಗೆ
ನಿನ್ನದು ಬಂಧನ
ನನಗದೇ ಬಯಲು
ನಿನ್ನ ಬಯಲ ಬಂಧನ
ನನ್ನ ಘಾಸಿಗೊಳಿಸಲು
ಮತ್ತದೇ ಬಂಧನದ(ಬಯಲ) ಮೊರೆ ಹೋಗುವೆ
ಭಾರತಿ ಅಶೋಕ್.