ಬಾಗೇಪಲ್ಲಿ ಅವರ ಗಜಲ್

ಕಾವ್ಯ ಸಂಗಾತಿ

ಗರತಿ ಎಂದು ತಿಳಿದೂ ನಿನಗಾಗಿ ಹಂಬಲಿಸಿದೆ ತಪ್ಪೆಸಗಿದೆ
ನಿನ್ನ ಎಡೆಗಿನ ನೆಡೆಯನು ನೀನು ಬೆಂಬಲಿಸಿದೆ ತಪ್ಪೆಸಗಿದೆ

ಹುಣ್ಣಿಮೆ ಚಂದ್ರ ನೀನೆಂದು ಮೆಚ್ಚುಗೆ ಹೇಳೆ ಖುಷಿಯಾದೆ
ತುಂಬು ಚಂದ್ರನ ತಪ್ಪದೇ ಕ್ಲಿಕ್ಲಿಸಲು ಅಂಡೆಲೆಸಿದೆ ತಪ್ಪೆಸಗಿದೆ

ರೂಬರೂಬಿನಲ್ಲೂ ನಿನ್ನಂದವ ಹೊಗಳೆ ಉಲ್ಲಸಿತಳಾದೆ
ವಿರೋಧಿಸದೆ ತುಟಿಯಲಿ ಸುಹಾಸ ಅಳವಡಿಸಿದೆ ತಪ್ಸೆಸಗಿದೆ.

ನಾ ಕಂಡ ಭ್ರಮಾ ಕನಸುಗಳ ವಿವರಿಸೆ ಮೌನದಿ ಓದಿ ಸುಮ್ಮನಿದ್ದೆ
ಒಲಿದೆ ನೀ! ಎಂದೆನುತ ಉಲ್ಲಾಸದಿ ನಾ ಸಂಭ್ರಮಿಸಿದೆ ತಪ್ಪೆಸಗಿದೆ

ವಿವರಿಸಲಾರೆ ಧನ್ಯತೆಯ ನನ್ನ ಪ್ರೇಮ ನಿನಗೆ ಅರುಹಿದಂದು
ನಿನ್ನ ಸೂರೆಗೊಂಡ ನಾನೆಂತ ಘನನೆಂದು ಗರ್ವಿಸಿದೆ ತಪ್ಪೆಸಗಿದೆ

ಅದಾವ ಪರಿಯ ಜ್ಞಾನವೋ ತಟಸ್ಥೆಯಾದೆ ಯಾವ ಕಾರಣವಿಲ್ಲದೆ
ಮೂರ್ಖನಾಗಿಸಿ ಎನ್ನ ಕೈ ಬಿಟ್ಟೆ ದೂರಸರಿದೆ ತಪ್ಪೆಸಗಿದೆ

ಗರತಿಯರೊಂದಿಗೆ ಪ್ರೇಮವಿರಿಸಿದ ನೀ ಹೇಳು ನ್ಯಾಯ ಕೃಷ್ಣಾ !
ಉತ್ತಮ ನಿನಗಿಂತ ನಾ ಆಕೆಯ ಪ್ರೇಮದಿಂದ ವಿರಮಿಸಿದೆ ತಪ್ಪೆಸಗಿದೆ


ಬಾಗೇಪಲ್ಲಿ

Leave a Reply

Back To Top