ಕಾವ್ಯ ಸಂಗಾತಿ
ಭುವನೇಶ್ ಓಂಕಾರ್
ನಾನು ನನ್ನ ಮಗಳು..
ಕರಿಗೂಸಿನ ಮೊಗದಲ್ಲಿ ಹಾಲ ಬೆಳದಿಂಗಳು
ಕಣ್ಣೆರಡು ತೊಳೆದ ನೈದಿಲೆಯ ದಳಗಳು
ಒಲವಿನಾಗಸವ ಬಾಚುವ ಪುಟ್ಟ ತೋಳುಗಳು
ನಕ್ಕಲ್ಲಿ ಮಿಂಚಿ ಮರೆಯಾಗಿದ್ದು ಸಾವಿರ ತಾರೆಗಳು..
ನಿನಗ್ಯಾರಿಷ್ಟ ಅಂದಾಗ ನನ್ನ ತೋರಿದ್ದ ತೋರುಬೆರಳು
ಸುಡುಬಿಸಿಲ ಜೀವನದಿ ನಿನ್ನ ನಗೆ ತಂಪು ನೆರಳು
ಮಾತಿಗೆ ನಿಂತರೆ ಹುರಿದಂತೆ ಪಟಪಟನೆ ಹರಳು
ಬಿಡಿಸಲಾಗದ ಒಲುಮೆಯ ಸರಳು
ನೀ ದೂರ ಇದ್ದಷ್ಟೂ
ಬದುಕು ಹಗಲಾಗದ ಇರುಳು
ನೆನಪು ಹಿಂಡಿವೆ ಕರುಳು
ಬಿಗಿದಂತೆ ಕೊರಳ ಉರುಳು
ನಡೆದ ಹೆಜ್ಜೆ ಮುಚ್ಚುತ್ತಿವೆ ಮರಳು
ಹಿಂದಿನಿಂದ ಓಡಿ ಬಂದು ತಬ್ಬುತ್ತಿದ್ದ ಕೈಗಳು
ಮಿಂಚುತ್ತಿದೆ ಇನ್ನೂ ಬಾಚಿದ
ಉದ್ದ ಕೂದಲ ಹೆರಳು
ಕೆನ್ನೆ ಮೇಲೆ ಗೊತ್ತಿಲ್ಲದೆ ನೀ ಕೊಟ್ಟ
ಮುತ್ತಿಗತ್ತಿದ ತುಸು ಉಗುಳು
ಛೀ.. ಅಂದಾಗ ನಿನ್ನ ಮುಗುಳು
ಭುವನೇಶ್ ಓಂಕಾರ್
Suuuper bhuvan
ಚೆನ್ನಾಗಿದೆ
ತುಂಬಾ ಚೆನ್ನಾಗಿ ಮೂಡಿ ಬಂದಿದೆ
ಸವಿತಾ ದೇಶಮುಖ
Just Awesome
Awesome bhuvanesh
ಅಂತರಾಳವ ಹೊಕ್ಕು ಕಣ್ಣೆವೆ ತೇವವಾಗಿಸುವ,
ಭಾವನೆಗಳ ಜಾಲದಲ್ಲಿ ಭುವನವನೆ ಮಿಡಿಸುವ
ಪದಗಳಿಗೆ ಮಿಂಚುಡುಗೆ
ತೊಡಿಸಿ ಮೈಮರೆಸುವ
ಓಂಕಾರ ನಾದವನೆ
ಝೇಂಕರಿಸುವ
ಜೇನು ಹನಿಗಳ
ಸವಿಯ ಕವಿಯೆ
ತಾನುಣಿಸುವಾ!!
ತುಂಬು ಹೃದಯದ ಧನ್ಯವಾದಗಳು
ಅಂತರಾಳವ ಹೊಕ್ಕು ಕಣ್ಣೆವೆ ತೇವವಾಗಿಸುವ,
ಭಾವನೆಗಳ ಜಾಲದಲ್ಲಿ ಭುವನವನೆ ಮಿಡಿಸುವ
ಪದಗಳಿಗೆ ಮಿಂಚುಡುಗೆ
ತೊಡಿಸಿ ಮೈಮರೆಸುವ
ಓಂಕಾರ ನಾದವನೆ
ಝೇಂಕರಿಸುವ
ಜೇನು ಹನಿಗಳ
ಸವಿಯ ಕವಿಯೆ
ತಾನುಣಿಸುವಾ!!