‘ಅಸಾಮಾನ್ಯಗೆಲುವು’ಇಂಗ್ಲೀಷ್ ಕವಿತೆಯ ಅನುವಾದ ಪಿ.ವೆಂಕಟಾಲಯ್ಯ

ಬೇಸಿಗೆ ಕಾಲದ ಮುಸ್ಸಂಜೆ,
ತನ್ನಯ ಗುಡಿಸಲ ಮುಂದೆ,
ಕುಳಿತನಜ್ಜ ಕಾಸ್ಪರ.
ತನ್ನಯ ಮೊಮ್ಮಕ್ಕಳು ಬಯಲಲ್ಲಿ,
ಆಡುತಲಿರುವದ ನೋಡುತಲಿ,
ದೀರ್ಘಾಲೋಚನೆ ಚಿಂತೆಯಲಿ.

ತಮ್ಮನ ಕಂಡು ವಿಲ್ಹೆಲ್ಮೈನ್,
ಉರುಳಿಸುವುದೇನನೊ ಫೀಟರ್ ಕಿನ್,
ದಪ್ಪಗೆ, ಗುಂಡಗೆ, ನುಣ್ಣನೆ, ವಸ್ತುವದು.
ಅದೇನೆಂಬುದು ತಿಳಿಯದು ಮ ಕ್ಕಳಿಗೆ,
ತೋರಲು ತಂದರು ತಾತನ ಬಳಿಗೆ,
ಏನಿದು ತಾತ ? ನುಣ್ಣಗೆ, ಗುಂಡಗೆ, ದಪ್ಪಗೆ.

ನೋಡಿದನದನು ಕಾಸ್ಪರ,
ಬಿಟ್ಟನು ದೀರ್ಘ ನಿಟ್ಟುಸಿರ,
ತವಕದಿ ನೋಡುವ ಮಕ್ಕಳಿಗೆ,
ಮನದಾಳದ ನೋವಲಿ ಇಂತೆಂದ.
” ಇದು ಸಾಮಾನ್ಯನೊಬ್ಬನ ತಲೆ ಬುರಡೆ,
ಅಸಾಮಾನ್ಯ ಗೆಲುವಿಗೆ ಸಂದ ಕೊಡುಗೆ.”
(It is common man Scull.
In the Uncommon Victory)

ನಮ್ಮಯ ತೋಟದ ಬಯಲಲ್ಲಿ,
ಕಂಡಿಹೆ ಇಂತವು ನೂರಾರು.
ನೇಗಿಲು ಕಟ್ಟಿ ಉಳುವಾಗ,
ಕೆದುಕಿಹೆ ಇಂತವು ಹಲವಾರು.
ಅಸಾಮಾನ್ಯ ಗೆಲುವಿನ ಹೋರಾಟದಲಿ,
ಮಡಿದರು ಜನ ಸಾವಿರಾರು.

ಹೇಳಿರಿ ತಾತ! ಏನದು ಯುದ್ಧ?
ಕೇಳಿದ ತಾತನ ಫೀಟರ್ ಕಿನ್.
ಹೇಳುವುದೇನನೋ ಕೇಳುವ ತವಕ,
ದಿಟ್ಟಿಸಿ ನಿಂದಳು ವಿಲ್ಹೆಲ್ಮೈನ್.
ಏಕಾಯಿತು ಯುದ್ಧ? ಹೇಳಿರಿ.
ಹೋರಾಡಿದರೇತಕೆ? ಆ ಪರಿ.

ಆಂಗ್ಲರು ಬಿದ್ದರು ಪ್ರೆಂಚ್ ಮೇಲೆ.
ಹರಿಯಿತು ಪ್ರೆಂಚರ ರಕುತದ ಹೊಳೆ.
ಏತಕೊ! ಏನೋ! ನಾನಂತೂ ಅರಿಯೆ.
ಕಾದಾಡಿರೇತಕೊ! ನಾ ತಿಳಿಯೆ.
ಜನ ಹೇಳುವುದು, ಆದರೂ ನಿಜವು.
ಆಂಗ್ಲರಿಗೆ ಸಂದ ಅಸಾಮಾನ್ಯ ಗೆಲುವು.

ಬ್ಲೆನ್ಹೈಮ್ ನ ‘ಯಾನ್’ ನದಿ ತೀರದಲಿ,
ನನ್ನಯ ತಂದೆಯ ವಾಸವು ಅಲ್ಲೆ,
ಆಂಗ್ಲರು ಅವನ ಮನೆಯನು ಸುಡಲು,
ಸತಿ ಸುತರೊಂದಿಗೆ ಪಲಾಯನ ಗೈಯಲು,
ತಿಳಿಯದು ಎನಗೆ ಅವರೀಗೆಲ್ಲೋ,
ಮಡಿದಿಹರವರು? ಗೋರಿಯಾದರೆಲ್ಲೊ ?.

ಕತ್ತಿಯ ಹೊಡೆತ, ಬೆಂಕಿಯ ನಾಲಿಗೆ,
ಚಾಚಿತು ದೇಶದೆಲ್ಲೆಡೆ ಹಗೆ.
ಮಕ್ಕಳ ತಾಯಿಯನೇಕರನ್ನು ಅಂದು,
ಹಸಿಗೂಸನು ಸಹ ಬಿಡದೆ ಕೊಂದು.
ವಾಸ್ತವಾಂಶವಿದು ನಿಮಗೆ ತಿಳಿದಿರಲಿ,
ಪ್ರತಿಯೊಂದು ಅಸಾಮಾನ್ಯ ಗೆಲುವಿನಲಿ.

ಯುದ್ಧ ಗೆದ್ದ ನಂತರದಾ ದೃಶ್ಯ,
ಅತಿಭೀಕರ, ಧಾರಣ, ನರಕ ಸದೃಶ.
ಗಗನಡಿಯ ಈ ಭೂಮಿಯ ಮೇಲೆ,
ಸಾವಿರಾರು ಕೊಳೆತ ಹೆಣಗಳ ರಾಶಿ,
ವಾಸ್ತವಾಂಶವಿದು ನಿಮಗೆ ತಿಳಿದಿರಲಿ,
ಪ್ರತಿಯೊಂದು ಅಸಾಮಾನ್ಯ ಗೆಲುವಿನಲಿ.

ಲಭಿಸಿತು ಕೀರ್ತಿ ಪತಾಕೆ ಮರ್ಲ ಭೋ ಡ್ಯೂಕನಿಗೆ,
ಅನುಕಂಪವೊಂದೆ ನಮ್ಮೀ ದೇಶದ
ದೊರೆಗೆ.
ಏನಿದು ತಾತ? ಏನಿದು ಹುಚ್ಚು ಹೋರಾಟ,
ಕೇಳಿದಳು ತಾತನ ವಿಲ್ಹೆಲ್ಮೈನ್.
‘ಅಲ್ಲ’ ವೆಂದವನೆದೆಯಲ್ಲೇನೊ ನೋವು.
ಇದು ಆಂಗ್ಲರಿಗೆ ಸಂದ ಅಸಾಮಾನ್ಯ ಗೆಲುವು


Leave a Reply

Back To Top