ಶ್ರೀಪಾದ ಆಲಗೂಡಕರ ಕವಿತೆ-ಗೌತಮ ಬುದ್ಧ

ಸಂಸಾರ ಸಾಗರದ ಆಸೆಗಳ ತ್ಯಜಿಸಿದನು
ರಾಜಭೋಗ ಐಶ್ವರ್ಯ ತೊರೆದ ಸಿದ್ಧಾರ್ಥನು
ಜ್ಞಾನದ ಜ್ಯೋತಿಯ ತನ್ನೆಡೆಗೆ ಪವಡಿಸಿದನು
ಬೌದ್ಧ ಧರ್ಮದ ಸ್ಥಾಪನೆಗೆ ನಾಂದಿಯಾದನು

ಶಾಂತಿ ಸಹನೆ ತಾಳ್ಮೆಯ ಪರಿಪಾಲಕನು
ತ್ಯಾಗದ ಮನೋಭಾವ ಗೌತಮ ಬುದ್ಧನು
ಅಹಂಕಾರ ಗರ್ವ ಕೋಪತಾಪ ತೊರೆದವನು
ಅಜ್ಞಾನದ ಅಂಧಕಾರದ ಕತ್ತಲನು ಓಡಿಸಿದನು

ಜ್ಞಾನದ ಬೆಳಕನು ಲೋಕಕೆ ಸಾರಿದನು
ಜೀವನದ ತತ್ವಗಳ ಸತ್ವಗಳ ಅರಿತವನು
ಬೋಧಿವೃಕ್ಷದ ಅಡಿಯಲ್ಲಿ ತಪೋಗೈದನು
ಬದುಕಿನ ಪರಿಪೂರ್ಣತೆ ಬೋಧಿಸಿದನು

ಬುದ್ಧಂ ಶರಣಂ ಗಚ್ಛಾಮಿಯ ಮಾಂತ್ರಿಕನು
ಪ್ರಸನ್ನತೆ ಶಾಂತತೆ ಮುಖದಲಿ ಬೀರುವನು
ಅಹಿಂಸೆ ಸತ್ಯನಿಷ್ಠೆ ಸೌಹಾರ್ದತೆ ತಿಳಿಸಿದವನು
ನಿಷ್ಕಲ್ಮಶ ಮನಸು ಹೃದಯದ ಗುಣದವನು


One thought on “ಶ್ರೀಪಾದ ಆಲಗೂಡಕರ ಕವಿತೆ-ಗೌತಮ ಬುದ್ಧ

Leave a Reply

Back To Top