ಸವಿತಾ ದೇಶಮುಖ್ ಕವಿತೆ-ಕಾರುಣ್ಯದತ

ಸಿದ್ದಾರ್ಥ ನಡುರಾತ್ರಿಯಲ್ಲಿ
ಎದ್ದು ನೀನಾದೆ ಬುದ್ಧ
ವಿಮಲ ತ್ಯಾಗದ ಸುಯೋಗದಿ

ನಸುಕಿನಲ್ಲಿ ಎದ್ದು ತಡಕಾಡಲು
ಸಾದ್ವಿ ಶಿರೋಮಣಿ ನಾಥನೆಲೆಂದು ಕಂಕುಳಲಿ ಕಂದನ ಹೊತ್ತು

ಅರಿತಳು ಸತ್ಯವ ಪತಿಯು
ನಡೆದನು ಮನದ ಬೆಳಕಿನಡೆ
ಸುಪ್ರಶಾಂತಿಯ ಚಿತ್ರ ,ದಿಟದ
ಶೋಧನೆಯ ಪಥದತ

ಬುದ್ಧನಾಗಿ ಮನುಜರ ಬುದ್ಧಿಯ
ತಿದ್ದಿದೆ ಕಳೆಯಲು ಜನ ಮನದ ಅಂಧಕಾರವ .,…

ಶಾಂತಿ ಅಹಿಂಸೆ ಸತ್ಯ ಸಂಸ್ಕರಿಸಿ
ಸುಜ್ಞಾನದ ಸಂಸ್ಕೃತಿ
ಹರಿಕಾರ…..

ಬುದ್ಧ ನಿನ್ನ ನೆನಹು ಶಾಂತಿಯ
ಸುನಿವಾಸ ಭಕ್ತಿಯ ತುಳಕು
ಸಕಲ ಜೀವಾತ್ಮರಲ್ಲಿ ದೇವರ ವಾಸ ಘನಪ್ರಜ್ಞೆಯ ಅರಿವು.,.

ಬುದ್ಧಕೃಪೆಯ ಕಾರುಣ್ಯದಿ
ಲೋಕವೆಲ್ಲ ತುಂಬಿ ತುಳುಕಿತ್ತು
ಸತ್ಯದ ಪಥದಿ

Leave a Reply

Back To Top