ಶಿವಮ್ಮ ಎಸ್ ಜಿ ಕೊಪ್ಪಳ ಕವಿತೆ-ಆಟ

ಆಡುವ ಬಾರಾಗೆಳೆಯ.
ಎಲ್ಲರೂ ಕೂಡಿ ಆಟ .
ಸಂತಸದಿಂದ ಆಡೋಣ.
ನಾವೆಲ್ಲರೂ ಸೇರಿ ಆಟ.

ಆಟವೆಂದರೆ ನಮಗೆ
ಎಲ್ಲರಿಗೂ ಬಲು ಇಷ್ಟ.
ಆಡುವುದೆಂದರೆ
ನಮಗಿಲ್ಲ ಯಾವ ಕಷ್ಟ.

ಆಟದಲಿ ಇರುವುದು
ಎರಡು ವಿಧಗಳು.
ಒಳಾಂಗಣ ಹೊರಾಂಗಣ.
ಎಂಬುವೇ ಆ ವಿಧಗಳು.

ಕೇರಂ ಚೆಸ್ ನಾವು
ಒಳಗೆ ಆಡುವೆವು.
ಲಗೋರಿ ಚಿಣ್ಣಿದಾಂಡು.
ಹೊರಗೆ ಆಡುವೆವು.

ಚಿಣ್ಣಿದಾಂಡು ಆಡುವ.
ಎಲ್ಲಾ ಚಿಣ್ಣರು ನಾವು.
ಚೆಸ್ ಆಡಿ ನಲಿಯುವ.
ಎಲ್ಲಾ ಚತುರರು ನಾವು.

ಆಟದಲುಂಟು ನಿತ್ಯ.
ಸರ್ವರಿಗೂ ಆರೋಗ್ಯ.
ದಿನಂಪ್ರತಿ ಆಡಲು ನಾವು
ಬರುವುದು ಸಂತಸ ಭಾಗ್ಯ.

ಆಟ ಓಟಗಳು ಎಂದರೆ
ನಮಗೆಲ್ಲಾ ಪಂಚಪ್ರಾಣ.
ಆಡಬೇಡ ಎನಲು.
ವ್ಯರ್ಥ ಆಟದ ಪ್ರಾಂಗಣ.

ಪಾಠದ ಜೊತೆಗೆ ಆಟ.
ಆಟದಜೊತೆಆರೋಗ್ಯ .
ಬಲ್ಲವರಿಲ್ಲಆಟದಮಹಿಮೆ.
ಎಲ್ಲಿಯಾದರೂ ಇದ್ದರೆ.
ಅದು ಬಹಳ ಕಡಿಮೆ

ಆಟಕೆ ಉಂಟು
ಹೆಸರುಗಳು ಹಲವು.
ಆಟದ ಮೇಲೆಯೇ
ಇದೆ ನಮ್ಮ ಒಲವು.

ಕ್ರೀಡೆ ಇದಕಿರುವ
ಒಂದು ಹೆಸರು.
ಕ್ರೀಡೆ ಇಲ್ಲದಿದ್ದರೆ.
ದಿನವೆಲ್ಲಬೇಜಾರು.


Leave a Reply

Back To Top