ಪ್ರತಿಭಾ ಪಾಟೀಲರ ಅವಳಿ ಕವನ ಸಂಕಲನಗಳಾದ”ಕನಸು ದೊರೆತ ಮಳಿಗೆ” ಮತ್ತು “ಸಿಂಬಿ” ಕೃತಿಗಳ ಲೋಕಾರ್ಪಣೆ

ನವಿಲುಗರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರು ಹಾಗೂ ಸಾಹಿತಿಗಳೂ ಆದ ಶ್ರೀಮತಿ ಪ್ರತಿಭಾ ಪಾಟೀಲರ ಅವಳಿ ಕವನ ಸಂಕಲನಗಳಾದ “ಕನಸು ದೊರೆತ ಮಳಿಗೆ” ಮತ್ತು “ಸಿಂಬಿ” ಎಂಬ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವು ಧಾರವಾಡದ ಆಲೂರು ವೆಂಕಟರಾವ ಸಭಾ ಭವನದಲ್ಲಿ ದಿನಾಂಕ ೦೨-೦೬-೨೦೨೪ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಜರುಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಾರವಾಡ ಆಕಾಶವಾಣಿಯ ಮುಖ್ಯಸ್ಥರು ಮತ್ತು ಹಿರಿಯ ಸಾಹಿತಿಗಳೂ ಆದ ಡಾ. ಬಸು ಬೇವಿನಗಿಡದ ಅವರು ವಹಿಸಿಕೊಂಡಿದ್ದಾರೆ. ಹಿರಿಯ ಸಾಹಿತಿಗಳಾದ ಡಾ.ಮಲ್ಲಿಕಾ ಘಂಟಿ ಅವರು ಕಾರ್ಯಕ್ರಮದ ಕುರಿತು ಆಶಯ ನುಡಿಗಳನ್ನಾಡಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಾಹಿತಿಗಳಾದ ಶ್ರೀಮತಿ ಸವಿತಾ ನಾಗಭೂಷಣ ಅವರು ಮಾಡಲಿದ್ದಾರೆ. ಪ್ರತಿಭಾ ಪಾಟೀಲರ “ಕನಸು ದೊರೆತ ಮಳಿಗೆ” ಕವನ ಸಂಕಲನವನ್ನು ಹೆಸರಾಂತ ಸಾಹಿತಿಗಳಾದಂತ ಡಾ.ರಾಜಶೇಖರ ಮಠಪತಿ (ರಾಗಂ) ಅವರು ಬಿಡುಗಡೆ ಗೊಳಿಸಿ ಪುಸ್ತಕದ ಕುರಿತು ಮಾತನಾಡಲಿದ್ದಾರೆ. ಪ್ರತಿಭಾ ಪಾಟೀಲರ ಇನ್ನೊಂದು ಕವನ ಸಂಕಲನವಾದ “ಸಿಂಬಿ” ಯನ್ನು ಸಾಹಿತಿಗಳಾದ ಡಾ. ಪ್ರಜ್ಞಾ ಮತ್ತಿಹಳ್ಳಿಯವರು ಬಿಡುಗಡೆ ಮಾಡಿ ಪುಸ್ತಕದ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದಂತ ಶ್ರೀ ಶಂಕರ ಹಲಗತ್ತಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಕರ್ನಾಟಕ ಸರಕಾರದ ಮಾಜಿ ನಿರ್ದೆಶಕರಾದಂತ ಶ್ರೀ ಶರಣಬಸವ ಅಂಗಡಿ ಅವರು ಆಗಮಿಸಲಿದ್ದಾರೆ. ಡಾ.ಕೆ.ಎಸ್.ಪಾಟೀಲ, ಶ್ರೀ ಸಿದ್ದನಗೌಡ ಪಾಟೀಲ, ಶ್ರೀ ಗುರುನಾಥ ಕುಸುಗಲ್ಲ, ಶ್ರೀಮತಿ ಪ್ರತಿಭಾ ಪಾಟೀಲ ಅವರ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದೆ.

        ಇದೇ ಸಂಧರ್ಭದಲ್ಲಿ ಶ್ರೀಮತಿ ಪ್ರತಿಭಾ ಪಾಟೀಲ ಅವರ ತಂದೆ ತಾಯಿಗಳಾದ ಶ್ರೀ ಗುರುನಾಥ ಕುಸುಗಲ್ಲ ಹಾಗೂ ಶ್ರೀಮತಿ ಕಮಲವ್ವ ಕುಸುಗಲ್ಲ ಅವರ ೫೦ ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮಾಚರಣೆಯೂ ನಡೆಯಲಿದೆ. ಇದೇ ಸಂಧರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೧೧ ಜನರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವದು.

        ನವಿಲುಗರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯು ಸ್ಥಾಪನೆಯಾಗಿ ೫  ವರ್ಷ ಪೂರ್ಣಗೊಂಡ ಸವಿನೆನಪಿಗಾಗಿ ಕವಿಗೋಷ್ಟಿಯನ್ನು ಹಮ್ಮಿಕೊಳ್ಳಲಾಗಿದೆ. ನಾಡಿನ ವಿವಿದೆಡೆಯ ಒಟ್ಟು ೨೨ ಕವಿಗಳು ಈ ಕವಿಗೋಷ್ಟಿಯಲ್ಲಿ ಭಾಗಿಯಾಗಿ ತಮ್ಮ ಕವನವನ್ನು ವಾಚನ ಮಾಡಲಿದ್ದಾರೆ. ಸಾಹಿತಿಗಳಾದ ಡಾ. ನಿಂಗಪ್ಪ ಮುದೇನೂರ ಅವರು ಕವಿಗೋಷ್ಟಿಗೆ ಚಾಲನೆ ನೀಡಲಿದ್ದು,  ಕವಿಗೋಷ್ಟಿಯ ಅಧ್ಯಕ್ಷತೆಯನ್ನು ಸಾಹಿತಿಗಳಾದಂತ ಶ್ರೀ ಚನ್ನಪ್ಪ ಅಂಗಡಿಯವರು ವಹಿಸಿಕೊಂಡಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಅವರು ಬರಲಿದ್ದಾರೆ. ಶ್ರೀ ಜಗದಿಶ ಘಾಣೆಕರ ಹಾಗೂ ಶ್ರೀಮತಿ ಶಾಲಿನಿ ರುದ್ರಮುನಿಯವರು ಘನ ಉಪಸ್ಥಿತಿ ವಹಿಸಿಕೊಂಡಿರುವರು. 

       ಶ್ರೀ ಪದ್ಮ ಭಾಸ್ಕರ ನೃತ್ಯ ಕಲಾ ಕೇಂದ್ರದ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ಸಂತೋಷ ಭದ್ರಾಪುರ ಮತ್ತು ಶ್ರೀಮತಿ ಜಯಲಕ್ಷ್ಮಿ ಹೊಳೆಆಲೂರ ಅವರು ಕಾರ್ಯಕ್ರಮದ ನಿರುಪಣೆ ನಡೆಸಿಕೊಡುವರು. ಪ್ರತಿಭಾ ಪಾಟೀಲರ ಬಂಧುಗಳು, ಸ್ನೇಹಿತರು, ಸಾಹಿತ್ಯ ಪ್ರೀಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಕೋರಲಿದ್ದಾರೆ.

One thought on “ಪ್ರತಿಭಾ ಪಾಟೀಲರ ಅವಳಿ ಕವನ ಸಂಕಲನಗಳಾದ”ಕನಸು ದೊರೆತ ಮಳಿಗೆ” ಮತ್ತು “ಸಿಂಬಿ” ಕೃತಿಗಳ ಲೋಕಾರ್ಪಣೆ

  1. ಶುಭವಾಗಲಿ ಪ್ರತಿಭಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಹಳ ಉತ್ಸುಕತೆಯಿಂದ ಕಾಯುತ್ತಿರುವೆ,

Leave a Reply

Back To Top