ಬಾಗೇಪಲ್ಲಿ ಅವರ ಗಜಲ್

ನನ್ನನು ಹಾದಿಯಲಿ ಕಂಡಾಗ ನಗಲೊಲ್ಲೇಕೆ ಬಿನ್ನಾಣಿ
ಅಚಾನಕ್ ಸಿಕ್ಕೆ ಓರೆನೋಟ ಬೀರಲೊಲ್ಲೇಕೆ ಬಿನ್ನಾಣಿ

ಪರಿಚಯಸ್ಥನಾದರೂ ಅಷ್ಟೊಂದು ಬಿಗುಮಾಣವೇ
ಪಕ್ಕಹಾದು ಹೋದರೂ ಮಾತಾಡಲೊಲ್ಲೇಕೆ ಬಿನ್ನಾಣಿ

ಎತ್ತರ ಬೆಳದು ಬಿರಿವ ಅಕಾಶ ಮಲ್ಲಿಗೆಯಂತೆ ನೀನು
ನೆಲ ಮಲ್ಲಿಗೆಯಂತೆ ಸೆಟೆದು ಬಿರಿಯಲೊಲ್ಲೇಕೆ ಬಿನ್ನಾಣಿ

ಕವಯಿತ್ರಿಯಾಗಿ ಗಜಲ್ಕಾರನ ಗುಟ್ಟು ಅರಿಯದಾದೆಯಾ
ಚಂದಿದ್ದೀಎನೆ ಕಣ್ಣಲಿ ಕೋಲ್ಮಿಂಚು ತರಲೊಲ್ಲೇಕೆ ಬಿನ್ನಾಣಿ

ಕೃಷ್ಣಾ! ಹೇಗೆ ಅರ್ಥೈಸಿಕೊಂಡೆ ಅಷ್ಟು ಗೋಪಿಕೆಯರ
ಗೀತೆ ಉಲಿದೆ ಪ್ರೀತಿಗುಟ್ಟು ಹೇಳೊಲೊಲ್ಲೇಕೆ ಬಿನ್ನಾಣಿ.


Leave a Reply

Back To Top