ಸುವರ್ಣ ಕುಂಬಾರ ಅವರ ಕವಿತೆ-ಪ್ರೇಮಾರಾಧನೆ

.

ಬೆಳದಿಂಗಳ ಹುಣ್ಣುಮೆ ಅಂದವದು
ಮಕರಂದವು
ಚಕೋರಿಯ ನಾಟ್ಯ ಮಯೂರಿಯಾಗಿಸುವ ಸಂಚಲನವು
ನೆರಳು ಬಿಸಿಲು ಎನ್ನುವ ಹಾಗಿರುವ ಬದುಕಿದು
ಯಾರ ಬೆಳಕು ಯಾರ ನೆರಳಿಗೂ ತಿಳಿಯದು

ಮೌನ ಕೋಗಿಲೆಯ ಸಂಗೀತ ಸುಮಧುರವು
ಕರ್ಣಾನಂದವಾ ಮಾಡುವ ಸುಮಧುರ ಭಾವವು
ಸಂಧಿಸದು ಎಂದೆಂದೂ ಚಂದ್ರ ಚಕೋರಿಯ ಕಥೆಯದು
ಆದರೂ ಅಮರ ಪ್ರೇಮದ ಸುಮಧುರ ಗಾತೆಯದು

ಚಂದ್ರನಲಡಗಿದೆ ಚಕೋರಿ ಅಸ್ಥಿತ್ವವು
ಚಕೋರಿ ವಿಹರದಲ್ಲಡಗಿದೆ ಚಂದ್ರಕೆಯ ಸಾರವು
ಪ್ರೇಮ ಬಯಕೆ ಬೆಗೆಯ ದಾಟಿ
ಸೇರಿದೆ ಧ್ಯಾನವು
ಪ್ರೇಮಾರಾಧನೆಯೆ ಸುಮಧುರ ಸಾನಿಧ್ಯವು


One thought on “ಸುವರ್ಣ ಕುಂಬಾರ ಅವರ ಕವಿತೆ-ಪ್ರೇಮಾರಾಧನೆ

  1. ಅದ್ಭುತ ಕವನ ರಚನೆ ಮೌನ ಕೋಗಿಲೆಯ ದನಿಯು
    Sripad Algudkar ✍️

Leave a Reply

Back To Top