ಚಹಾ ದಿನದ ಅಂಗವಾಗಿ ಕುಸುಮಾ.ಜಿ. ಭಟ್ ಅವರ ಕವಿತೆ-ನೀನೆಂದ್ರೆ?!

ನೀನೆಂದ್ರೆ ನಂಗೆಷ್ಟು ಇಷ್ಟ!
ನನ್ನ ಬೆಸ್ಟ್ ಫ್ರೆಂಡ್ ನೀ
ಅರ್ಧ ದಿನ ಸಿಗದಿದ್ರೆ
ಕಳೆಯೋದು ತುಂಬಾ ಕಷ್ಟ!

ಹಗಲು ರಾತ್ರಿ
ಹೊತ್ತು ಗೊತ್ತಿಲ್ಲ
ಮಳೆ ಚಳಿಗಾಳಿಗೆ
ನಿನ್ನ ಬೆಚ್ಚಗಿನ ಅನುಭವ
ಬೇಕೆನಿಸುವುದಿಲ್ಲ!

ತುಟಿ ಸುಟ್ಟುಕೊಂಡ್ರು
ನಾ ಮತ್ತೆ ನಿನ್ನನೇ
ಬಯಸುವೆ
ನಿನ್ನ ಆ ವಿಶಿಷ್ಟ
ಉತ್ಕೃಷ್ಟ ಸ್ವಾದಿಷ್ಟದಿಂದ
ಎನ್ನ ಬರಸೆಳೆವೆ!

ಬರೆದಷ್ಟು ಸಾಲದು
ನಿನ್ನ ಗುಣಗಾನ
ನೀ ಸಿಕ್ಕಷ್ಟು ಪಡೆವೆ ನಾ
ಹೊಸತನವನ್ನ!
ಈಗ ತಿಳಿಯಿತೇ
ಚಹಾ ಪ್ರಿಯೆ ನಾ!

One thought on “ಚಹಾ ದಿನದ ಅಂಗವಾಗಿ ಕುಸುಮಾ.ಜಿ. ಭಟ್ ಅವರ ಕವಿತೆ-ನೀನೆಂದ್ರೆ?!

  1. Very nice Kusuma,this is what I like to write ✍️, your sentences are very beautiful & meaning full, suuuperb, all the best, keep it up.

Leave a Reply

Back To Top