ಹನಿಬಿಂದು ಅವರ ಕವಿತೆ-ಸಮರ್ಪಣೆ

ಪದಗಳ ಗೂಡಲಿ ಸಮರ್ಪಣೆ ಪಕ್ಷಿಗೆ
ಗುಟುಕನು ನೀಡುತಿಹೆ
ಮದವನು ಮರೆತು ಮಾನವ ಬದುಕ
ಹಾಡನು ಹಾಡುತಿಹೆ

ಶೋಷಣೆ ಮಾಡಿದ ಮನಗಳ ನಿತ್ಯ
ನೆನಪಿಸಿ ಬಾಳುತಲಿ
ಪೋಷಣೆಗೈದು ಬೆಳೆಸಿದ ಮಾತೆಯ
ವರವನು ಬೇಡುತಲಿ

ಘೋಷಣೆ ಕೂಗುತ ಮತಗಳ ಬೇಡಿ
ಸಮಾಜವ ಮರೆಯುತ್ತ
ಸಂರಕ್ಷಣೆ ಮಾಡುವ ಕಾರ್ಯವ ಮರೆತು
ಮೋಹದಿ ತೇಲುತ್ತ

ಜನಗಳ ಶಾಪ ಬೇಡವೋ ಭೂಪ
ಸಹಾಯವ ನೆನೆಯೋಣ
ದೇಶದ ಒಳಿತಿಗೆ ಬಾಳನು ನೀಡಿ
ಕೃತಜ್ಞತೆ ನೀಡೋಣ//

—————————

One thought on “ಹನಿಬಿಂದು ಅವರ ಕವಿತೆ-ಸಮರ್ಪಣೆ

Leave a Reply

Back To Top