ಭೋವಿ ರಾಮಚಂದ್ರ ಅವರ ಕವಿತೆ-ಗೋರಿಯೊಳಗಿನ ಶವ

ಗೋರಿಯೊಳಗಿನ ಶವ
ಗೆದ್ದಲ ಹುಳದ ಉದರದಲ್ಲಿ ಸೇರಿತ್ತು ಬೆಳಗಿನ ಜಾವ,
ಉಳಿದಿದ್ದು ತಲೆ ಬುರುಡೆ ಕೈಯಿ ಕಾಲು ಬೆನ್ನು ಮೂಳೆ
ಅಕ್ಕ ಪಕ್ಕ ಭೂಮಿಯ ಮೇಲೆ ಕಿತ್ತು ಹಾಕಿದ ಕಳೆ .

ಸುತ್ತಲೂ ಮಣ್ಣು
ಇಲ್ಲಿ ಜಾತಿ ಮತ ಪಂಥ ಭಾಷೆಯ ಹಂಗಿಲ್ಲದ ಕಣ್ಣು
ಧರ್ಮ ಅರ್ಥ ಕಾಮ ಮೋಕ್ಷದ ಜೀವನ
ಸೌಮ್ಯವಾಗಿ ಭೂಮಿಗೆ ಬೆನ್ನು ಚಾಚಿದೆ ಮರಣ .

ಆರು ಮೂರು ಅಂಗುಲದ ತೆಗ್ಗು
ಭೂಮಿಯ ಮೇಲೆ ಇದ್ದ ಅಹಂಕಾರವನ್ನು ಮುಚ್ಚಿದೆ
ಇಲ್ಲಿ ಶವವು ನಿರ್ಜೀವಿವೋ ಇಲ್ಲ ಜೀವಿವೋ,
ಕಾಣದ ಲೋಕ ನಿರಾಕಾರವೇ
ಕಂಡಿದ್ದು ಮಾತ್ರ ಆಕಾರವೇ ?

ಗೋರಿಯೊಳಗಿನ ಶವ ಪತ್ತೆಯಾಗಿದೆ
ಹೂತು ಮೂರು ದಿನದ ಮೇಲೆ,
ಭೂಮಿಯ ಮೇಲೆ ಇದ್ದ ಜೀವ ಭೂಮಿಯೊಳಗೆ ಶವವಾಗಿದೆ,
ದೇಹದ ಒಳಗೆ ಇದ್ದ ರಕ್ತ ಮಾಂಸವು ಅರ್ಧ ಕೊಳೆತು ಸುತ್ತಲು ನಾರುತ್ತಿದೆ ತನ್ನದೆ ಕಲೆ .


2 thoughts on “ಭೋವಿ ರಾಮಚಂದ್ರ ಅವರ ಕವಿತೆ-ಗೋರಿಯೊಳಗಿನ ಶವ

Leave a Reply

Back To Top