ಸಂಧ್ಯಾರಾಗ ಅವರ ಕವಿತೆ-ಕಲಾವಿದ

ಪ್ರಸಿದ್ಧ ಕಲಾವಿದನ ಕುಂಚದಲ್ಲಿ ಅಪ್ರತಿಮ ಸುಂದರಿಯ
ಚಿತ್ರವೊಂದು ಮೂಡಿತ್ತು..
ಆದರೂ ಸುಂದರಿಯ ಅರ್ಧ ಮುಖ ಕಾಣದಂತಿತ್ತು…

ವೀಕ್ಷಕರ ಪ್ರಶ್ನೆ
ಯಾರೀಕೆ?
ಯಾಕೆ ಹೀಗೆ
ಸುಂದರಿಯ ಸೌಂದರ್ಯ ಮರೆಮಾಚಿರುವಿರೇಕೆ?

ಕಲಾವಿದನ ಉತ್ತರ ಹೀಗಿತ್ತು
ಅವಳು ನನ್ನ ಬಾಳು ಬೆಳಗಲು ಬರಬೇಕಿತ್ತು
ಹೆಣ್ಣು ನೋಡುವ ದಿನ ಅವಳ ಇಷ್ಟು ಮುಖ ಮಾತ್ರ ಕಂಡಿತ್ತು
ಆದರೆ ಅವಳ ಸೌಂದರ್ಯವೇ ಅವಳಿಗೆ ಮುಳುವಾಯ್ತು
ಕಾಮಾಂಧನ ಆಸಿಡ್ ದಾಳಿಗೆ ತುತ್ತಾಯ್ತು
ಅದನ್ನು ತಿಳಿದ ದಿನದಿಂದ ಈ ಕಲಾವಿದನ ಕುಂಚ ಸ್ತಬ್ಧವಾಯ್ತು

————-

Leave a Reply

Back To Top