ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್
ಗ್ರಹಿಸಿದೆ ಗಜಲ ಬಗೆಗಿನ ನಿನ್ನ ಆಸಕ್ತಿ ಲಲನೆ
ತೊರ್ಗೊಡದಂತೆ ನಟಿಸುತಿಹೆ ವಿರಕ್ತಿ ಲಲನೆ
ಸತ್ಯವದು ಹೇಳಿದ್ದು ನಿನ್ನ ಕವಿತೆ ಚಂದವೆಂದು
ಬಣ್ಣಿಸೆ ಬೇರೆತರದಿ ಆಗುತ್ತಿತ್ತು ಕುಯುಕ್ತಿ ಲಲನೆ
ಸಕಲದಿ ಅಂದವ ಅರಸುವುದದು ಸಹಜ ಗುಣ
ಇದು ತಿಳಿಸೆ ಹೇಳಲು ಬೇಕಿಲ್ಲ ದ್ವಿರುಕ್ತಿ ಲಲನೆ
ಅಂದವಿರುವುದೇ ಆನಂದಕಾಗಿ ಭೋಗಕ್ಕಲ್ಲವದು
ಹೂಡತ್ತಿಲ್ಲ ಕ್ಷಣಿಕ ಸುಖಕೆ ಯಾವ ಚತುರೋಕ್ತಿ ಲಲನೆ
ಕೃಷ್ಣಾ! ಬ್ರಹ್ಮಾನಂದದ ನಶೆಯಲಿ ಆರಾಧಿಸಿಹರೂ ಇಹರು
ಸೂಫಿ ಸಂತರೂ ಇದೇ ಹಾದಿಯಲಿ ಪಡೆದರು ವಿಮುಕ್ತಿ ಲಲನೆ.
(ಚತುರೋಕ್ತಿ ವ್ಯಾಕರಣ ಬದ್ಧವಿಲ್ಲದಿರೆ “ಯುಕ್ತಿ” ಎಂದೋದಿಕೊಳ್ಳಲು ಕೋರುವೆ)
ಬಾಗೇಪಲ್ಲಿ
Fun mix with poetry