ಕಾವ್ಯ ಸಂಗಾತಿ
ಶೃತಿ ರುದ್ರಾಗ್ನಿ
ಗೋರಿಯೊಳಗೊಂದು
ಬೆಚ್ಚನೆ ಕವಿತೆ ಕುಳಿತಿತ್ತು…
ನೀ ತಿರುಗಿ
ನೋಡದೆ
ಹೊರಟು
ಹೋದ
ಮೇಲೆ…
ಎದೆ ಹಾಳೆಯ
ಪದಗಳೆಲ್ಲವೂ
ಉಸಿರುಗಟ್ಟಿ
ಸಾಯುತಿವೆ…
ನೀನೋ
ನನ್ನೊಳಗಿನ
ಕವಿ ಕರ್ಪೂರ…
ಏನೂ ಅರಿಯದಂತೆ
ನನ್ನನ್ನೇ ಸುಡುತ್ತಾ
ಶೀರ್ಷಿಕೆ
ಬುಡದ ಹಸಿ
ಮಣ್ಣಿನ
ಬರಹಗಳ
ಒಳಗೆ
ನೆಮ್ಮದಿಯಾಗಿ
ಮಲಗಿದ್ದೀಯಾ……?
ಒಂದೇ ಒಂದು
ಬಾರಿ
ಲೇಖನಿ
ಹಿಡಿದು
ನನ್ನ ಕಣ್ಣ
ಮೇಣದ ಬೆಳಕ
ದಿಟ್ಟಿಸು…
ಎದೆ ಚಿಪ್ಪಿನೊಳಗಿರುವ
ಸಾವಿರ ಸಾಲುಗಳನ್ನು
ಒಂದೇ
ಉಸಿರಿನಲಿ ಹೇಳಿ
ಘಮಿಸಿ
ನಿನ್ನೊಳಗೆ
ಕರಗಿ ಬಿಡುವೆ…
ಇಂಚಾದರೂ
ಸರಿ
ಮೂರು
ಅಡಿಗಾದರೂ
ಸರಿ…!
ನಾನು
ಮಣ್ಣಾಗಬೇಕು..!
ನಿನ್ನ
ಕಾವ್ಯದ
ಖಬರಸ್ಥಾನದೊಳಗೆ…
ನಿನ್ನ
ಪಳೆಯುಳಿಕೆಯ
ಪದ್ಯಕ್ಕೆ
ನಾ
ಸದಾ ದಾಸಿ…
ಶೃತಿ ರುದ್ರಾಗ್ನಿ