ಡಾ ಡೋ.ನಾ.ವೆಂಕಟೇಶ-ನೆನಪುಗಳು ಮುಗಿ ಬಿದ್ದಾಗ

ಬಿಳಿ ವಯಸ್ಸಿನಲ್ಲಿ ಬಂದ ನೆಲೆಗೆ
ಮುಗಿಬಿದ್ದ ಕರಿ ನೆನಪುಗಳು

ಬಂಧು ಗಳಿರಲಿ ಬಾಂಧವರೂ
ಸುಳಿಯಲಿಲ್ಲ ಸನಿಹಕೆ.
ಜೀವನಾಮೃತಗಳು ಎಲ್ಲೂ
ಕೈಮರಗಳಾಗಲಿಲ್ಲ!

ಕೃಷ್ಣ ಹೇಳಿದ್ದು ಶಿಷ್ಯಾ ಮಾಡು
ನಿನ್ನ ಕೆಲಸ ನೀನೇ
ಆಗುವುದು ಆಗಿಯೇ ತೀರುವುದು
ನಾ ಹೇಳಿದ ಹಾಗೇ!

ಸಿದ್ಧಾರ್ಥ ಬುದ್ಧನಾಗಿದ್ದು ಹೇಗೆ
ರಾಜನಾಗದೇ ಸಂಸಾರ ಬಿಟ್ಟಿದ್ದು ಹೇಗೆ
ತಲೆ ಬೋಳಿಸಿ ಆಸೆ ಬೀಳಿಸಿದ್ದು ಹೇಗೆ

ಕಾಯಕವೇ ಕೈಲಾಸ
ವಚನಗಳೇ ದಿಕ್ಸೂಚಿ
ಜೀವನ ಪಾತ್ರ
ಮಹಾ ನವಮಿ!

ಮಗ ಮಗಳು ನನ್ನ ತನ್ನವರು ಅವರವರ ಜೀವನ ಅವರವರಿಗೆ.
ದಾರಿ ಮುಗಿದ ನಂತರ ಬುತ್ತಿ ಗಂಟಿನ
ನಂಟೇಕೆ !

ನಗುನಗುತ್ತ ಹೊರಡು
ಬೀಗುತ್ತ ಹೊರಡು
ಇಲ್ಲಿದ್ದವರಿಗೆ ಪರದೇಶಿಗಳಿಗೆ ಪರವೂರವರಿಗೆ ಹೇಳುತ್ತ

ಕೃತಜ್ಞ ನಾ ನಿಮಗೆ ಇಷ್ಟುದ್ದ
ನಿಂತ ನೆರಳಿಗೆ,
ಆಸರೆಗೆ ಅರವಟ್ಟಿಗೆ ಕೊಟ್ಟವರಿಗೆ
ಕರ್ತವ್ಯ ನೆನಪಿಸಿದವರಿಗೆ
ಆಸೆಯನ್ನೇ ತ್ಯಜಿಸ ಹೇಳಿದವರಿಗೆ!

ದೀಪವೇ ಇರದ ರಾತ್ರಿಯ
ಕರಿ ನೆರಳು
ಇಳಿ ವಯಸ್ಸಿನಲ್ಲಿ ಇತಿಹಾಸವಾಗಲೇ ಇಲ್ಲ!

ನೆನಪುಗಳು ಮುಗಿ ಬೀಳುವ ಕಾಲ
ಮುಗಿದಿತ್ತಲ್ಲ!


9 thoughts on “ಡಾ ಡೋ.ನಾ.ವೆಂಕಟೇಶ-ನೆನಪುಗಳು ಮುಗಿ ಬಿದ್ದಾಗ

  1. ಚೆನ್ನಾಗಿದೆ ಮುಪ್ಪಿನ ಬವಣೆ
    .. ಡಾ. ಸೂರ್ಯ ಕುಮಾರ್ ಮಡಿಕೇರಿ

  2. ನಿಮ್ಮ ಆಂತರಿಕ ಭಾವನೆಗಳನ್ನು ವ್ಯಕ್ತಪಡಿಸಲು ಉತ್ತಮ ಪ್ರಯತ್ನವನ್ನು ಮಾಡಿದ್ದೀರಿ. ಕವಿತೆ ಚೆನ್ನಾಗಿದೆ.

    1. ಧನ್ಯವಾದಗಳು ಸರ್ ತಮ್ಮ ಮೆಚ್ಚುಗೆಗೆ!

Leave a Reply

Back To Top