ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
ವಾಸ್ತವ
ಇಲ್ಲಿ ಎಲ್ಲವೂ ರಾಜಕೀಯ
ಬದುಕು ಮಾತ್ರ ಶೋಚನೀಯ
ಎಲ್ಲದಕ್ಕೂ ಮತೀಯ ಬಣ್ಣ ಮಾನವೀಯತೆಯ ಮರೆತಿರುವೆವಣ್ಣ
ಕೊಲೆ ಸುಲಿಗೆ ಎಲ್ಲವೂ ಸಾಮಾನ್ಯ
ಹಳ್ಳಿ ಕಾಡಿನಲ್ಲಿನ ಜೀವನವೇ ಧನ್ಯ
ಬದುಕಿಗೆ ಇಲ್ಲ ಇಲ್ಲಿ
ಯಾವುದೇ ಗ್ಯಾರಂಟಿ
ನ್ಯಾಯ ನೀತಿಗಳಿಗೆ ಇಲ್ಲ ವಾರಂಟಿ
ಸತ್ತವರ ಹೆಸರಿನಲ್ಲಿ ನಡೆಸುವರು
ಸುಮ್ಮನೆ ಹುಚ್ಚಾಟ
ಜನಸಾಮಾನ್ಯರು ಕಲಿತಿಲ್ಲ
ಇನ್ನೂ ಪಾಠ
ಎರಡು ದಿನ ಎಲ್ಲರಲ್ಲೂ
ಮೂಡುವುದು ರೋಷ ಆವೇಶ
ಬಿತ್ತುವರು ಜನರ ನಡುವೆ
ವಿಷ ಬೀಜದ ದ್ವೇಷ
ಯಾರಿಗೂ ಬೇಕಿಲ್ಲ ನ್ಯಾಯ
ಸಮ್ಮತ ಹೋರಾಟ
ಎಲ್ಲರೂ ನಡೆಸುವರು
ಆ ಕ್ಷಣಕಷ್ಟೇ ಹಾರಾಟ
ನ್ಯಾಯನೀತಿಗೆ ಇಲ್ಲಿ ಬೆಲೆ ಇಲ್ಲ
ಸತ್ಯವಂತರಿಗೆ ಇದು ಕಾಲವಲ್ಲ
ಕಣ್ಣಿದ್ದು ಕುರುಡರಂತೆ ವರ್ತಿಸುವರಲ್ಲ ಬಡವರ ಜೀವನ ಕಣ್ಣೀರಿನಲ್ಲೆ
ಕರಗಿ ಹೋಗುವುದಲ್ಲ
ವಿಷಯಾಂತರದಲ್ಲಿ ಕಾಲ ಕಳೆಯುವರೆಲ್ಲ ವಾಸ್ತವದ ಬದುಕು ಯಾರಿಗೂ ಬೇಕಿಲ್ಲ
ಬಣ್ಣ ಬಣ್ಣದ ರೆಕ್ಕೆ ಕಟ್ಟಿ ಬಿಡುವವರೆಲ್ಲ
ಸತ್ಯ ಶೋಧನೆಯು ಯಾರಿಗೂ ಬೇಕಿಲ್ಲ
ಸತ್ಯ ಸಾಯುತ್ತಿದೆ ಸೋಲು ಮೆರೆಯುತ್ತಿದೆ ಪ್ರೀತಿ ವಿಶ್ವಾಸ ಆತ್ಮೀಯತೆ ಮರೆಯಾಗುತ್ತಿದೆ ಉಸಿರೋಳಗೆ ವಿಷ ಬೆರೆಯುತ್ತಿದೆ
ಹಣದ ಅಮಲಿನಲ್ಲಿ ಮನುಷ್ಯತ್ವ ಮರೆಯಾಗುತ್ತಿದೆ
ಮಾನವೀಯತೆಯ ಮೌಲ್ಯ ಕೊನೆಯಾಗುತ್ತಿದೆ
ಜೀವನ ಅದೋಗತಿಗೆ ಹೋಗುತ್ತಿದೆ
ಪ್ರೀತಿ ಕಾರುಣ್ಯತೆ ದೂರವಾಗುತ್ತಿದೆ
ಅಂತ್ಯವಾಗಬೇಕಿದೆ ರಕ್ತ ಚರಿತೆ
ಎಲ್ಲರಲ್ಲಿಯೂ ಹರಿಯಬೇಕಿದೆ
ಪ್ರೀತಿಯ ವರತೆ
ಎಲ್ಲೆಡೆಯೂ ಇರಬೇಕು ಕಾನೂನಿನ ಸುವ್ಯವಸ್ಥೆ
ದೂರವಾಗಿಸಬೇಕು ಅರಾಜಕತೆಯ ಅವ್ಯವಸ್ಥೆ
ನಾಗರಾಜ ಜಿ. ಎನ್. ಬಾಡ