ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಅಮೃತ
ಒಲವಿನಮೃತದ ಸವಿಯ
ಉಂಡವನಿಗೆ ಗೊತ್ತು
ಸವಿದಷ್ಟು ಸವಿಬೇಕೆನುವ
ಸಿಹಿಯಲಿ ಅದರ ಗತ್ತು //
ಅಪ್ಪುಗೆಯ ತೋಳ ಸೆರೆಯಲಿ
ನೋಟದ ನವಿರಾದ ಭಾವದಲ್ಲಿ
ನಲಿವಿನ ಹರ್ಷ ನಗುವಿನಲ್ಲಿ
ತುಂಬಿ ತುಳುಕಿ ಹರಿಯುವುದು ನಿತ್ಯ //
ಪ್ರೀತಿ ಮುತ್ತಿನಾ ತುತ್ತಲಿ
ಮೈಮರೆಸಿ ಮರುಳಾಗಿಸುವುದು
ಪ್ರೇಮಸುಧೆಯ ಜೇನಲ್ಲಿ
ನಿಂದು ಜಲಪಾತವಾಗುವುದು //
ಬಯಲಾಲಯದ ಚೆಲುವಲಿ
ಮಿಳಿತಗೊಂಡು ಹೊಮ್ಮುವುದು
ಎಲೆ ಮರ ಬಳ್ಳಿ ಬೆಡಗಲ್ಲಿ
ಒಂದಾಗಿ ಚೆಂದಾಗಿ ಮಿನುಗುವುದು //
ಅಂತರಾತ್ಮದಾ ಗೂಡಲ್ಲಿ
ಗುಬ್ಬಿಯಂತೆ ಚಿಂವಟ್ಟುವುದು
ಹೃದಯದಾ ಬಡಿತದಲ್ಲಿ
ಒಡಗೂಡಿ ಮಿಡಿಯುವುದು//
ಡಾ ಅನ್ನಪೂರ್ಣ ಹಿರೇಮಠ
ಸೂಪರ್
Good thought,well written by you