ಪುಸ್ತಕ ಸಂಗಾತಿ
‘ಶಬ್ದ ಸೋಪಾನ’
ದಿಲೀಪ್ ಕುಮಾರ್ ಅವರ ಹೊಸ ಕೃತಿ
(ವಚನ ಸಾಹಿತ್ಯ ಕುರಿತು ಬರೆದ ಬರಹಗಳು)-
ಲೋಕಾರ್ಪಣೆಯ ಸಂಭ್ರಮ
ಶಬ್ದ ಸೋಪಾನ
ವಚನ ಸಾಹಿತ್ಯ ಕುರಿತು ಬರೆದ ಬರಹಗಳು
ಸಂಗಾತಿ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾದ ವಿಮರ್ಶಾ ಅಂಕಣ ಬರಹಗಳ ಸಂಕಲನ ನಾಳೆ ಮೈಸೂರಿನಲ್ಲಿ ಪ್ರಕಟವಾಗುತ್ತಿದೆ. ಈ ಕೃತಿಗೆ ಮೊದಲ ಓದನ್ನು ನಾಡಿನ ಹೆಮ್ಮೆಯ ವಿಮರ್ಶಕರಾದ ಪ್ರೊ. ಓ. ಎಲ್. ನಾಗಭೂಷಣ ಸ್ವಾಮಿ ಅವರು ಬರೆದಿದ್ದಾರೆ. ಬೆನ್ನುಡಿಯನ್ನು ಪ್ರೊ. ಜಿ. ಪಿ. ಬಸವರಾಜು ಅವರು ಮತ್ತು ಪ್ರೊ. ಎಂ. ಜಿ. ಚಂದ್ರಶೇಖರಯ್ಯನವರು ಬರೆದಿದ್ದಾರೆ. ಪುಸ್ತಕದ ಮುಖಪುಟದ ವರ್ಣಚಿತ್ರವನ್ನು ನಾಡಿನ ಹೆಮ್ಮೆಯ ಕಲಾವಿದಾರ ಸೂರ್ಯಕಾಂತ ನಂದೂರರು ಮಾಡಿಕೊಟ್ಟಿದ್ದಾರೆ. ಫೋಟೋವನ್ನು ಯುವ ತಲೆಮಾರಿನ ಪ್ರತಿಭಾವಂತ ಕವಿ ಶ್ರೀಕೃಷ್ಣ ಶ್ರೀಕಾಂತ ದೇವಾಂಗಮಠ ಅವರು ತೆಗೆದುಕೊಟ್ಟಿದ್ದಾರೆ. ಸಂಕಲನದ ಪುಟವಿನ್ಯಾಸ ಮತ್ತು ಮುಖಪುಟ ವಿನ್ಯಾಸಗಳನ್ನು ಕೀರ್ತನ ಗ್ರಾಫಿಕ್ಸ್ ನ ಬಸವರಾಜು ಅವರು ಮಾಡಿದ್ದಾರೆ. ಶಬ್ದ ಸೋಪಾನ ಸಂಕಲನವು ನಾಡಿನ ಹೆಮ್ಮೆಯ ಪ್ರಕಾಶನವಾದ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯಿಂದ ಅದರ ರುವಾರಿಗಳಾದ ಶ್ರೀಮತಿ ಪ್ರತಿಭಾ ಛಾಯಾಪತಿ ಅವರ ಕಡೆಯಿಂದ ಹೊರಬರುತ್ತಿದೆ. ಪುಸ್ತಕದ ಮುದ್ರಣವನ್ನು ಕೀರ್ತನ ಗ್ರಾಫಿಕ್ಸ್ ನ ಬಸವರಾಜು ಅವರು ಮುದ್ರಿಸಿದ್ದಾರೆ.
ಅಂಕಣ ಬರಹಗಳಾಗಿ ಇಲ್ಲಿನ ಲೇಖನಗಳನ್ನು ಬರೆಯಲು ಅವಕಾಶ ಕೊಟ್ಟ ಪತ್ರಿಕೆಯ ಸಂಪಾದಕರಿಗೆ ಮತ್ತು ಅಡಿಟಿಪ್ಪಣಿಗಳ ಸಹಿತ ಪ್ರಕಟಮಾಡಿದ ಪತ್ರಿಕೆಗೆ ಆಭಾರಿ. ನನಗೆ ಸಂತೋಷವಿದೆ, ಹೆಮ್ಮೆಯಿದೆ ಸಂಗಾತಿ ಪತ್ರಿಕೆಯಲ್ಲಿ ನಿರಂತರವಾಗಿ ಬರಹಗಳನ್ನು ಬರೆದಿದ್ದಕ್ಕೆ.
ಆರ್. ದಿಲೀಪ್ ಕುಮಾರ್
ಚಾಮರಾಜನಗರ