ಯುವ ಶಕ್ತಿ ದೇಶದ ಸಮಾಜದ ಭವ್ಯ ಶಕ್ತಿ ..!ಕಟ್ಟೆ ಎಂ ಎಸ್ ಕೃಷ್ಣಸ್ವಾಮಿಯವರ ಲೇಖನ

ಮನಕ್ಕೆ ಮುದ ನೀಡುವುದು ಸತ್ಯ , ನಿತ್ಯ ಸವಿ ನುಡಿ , ನಗುವ ಮುಖದ ಜೊತೆಗೆ ಅಂತಃಕರಣವು ಶುದ್ದಿಯಾಗಿರಬೇಕು ಅಲ್ವೇ , ಬಾಯಿಯಲ್ಲಿ ಮಾತ್ರ ತಮ್ಮನೇ ತಾವು ಹೊಗಳಿಕೊಂಡರೆ  ಸಾಲದು , ಸ್ವಾರ್ಥಕ್ಕಾಗಿ ಬರೀ ಅನ್ಯರ ತಪ್ಪುಗಳನ್ನೇ ಹುಡುಕುವುದು ಹಾಗೂ ಬೇರೆಯವರೊಂದಿಗೆ ಅವರ ಬಗ್ಗೆ ಇವರ ಬಗ್ಗೆ ಬಣ್ಣ ಕಟ್ಟಿ ಹೇಳುವುದು , ಅದು ತಾತ್ಕಾಲಿಕ  ಅದನ್ನ ಮರೆಯಬಾರದು , ಬೇರೆಯವರ ವಿಷಯದಲ್ಲಿ ನ್ಯಾಯಧೀಶ ರಾಗುವ ನಾವು  ,  ನಮ್ಮ ವಿಷಯ ಬಂದಾಗ ವಕೀಲರಾಗುವುದೇಕೆ  ? ,  ಮನಸು ಬಾಯಿ , ಕರವು  ಶುದ್ದಿಯಿಲ್ಲದೇ ಏನನ್ನು ಸಾಧಿಸಲಾಗದು  ,  ದಕ್ಕಿದರು  ಅದು ಅಶಾಶ್ವತ ಮರೆಯಬಾರದು  ,  ಇಂಥ ಜನಗಳು ನಮ್ಮ ಅಕ್ಕಪಕ್ಕ ಸುತ್ತನೇ ಇರುತ್ತಾರೆ  ,  ಎಚ್ಚರವಹಿಸಿದರೆ ಮಾತ್ರ ಸಜ್ಜನರಿಗೆ ಉಳಿಗಾಲ , ಇಲ್ಲವಾದರೆ ನಾವೇ ಉರುಗಕ್ಕೆ ಕ್ಷೀರ ಎರೆದಂತೆ  ಎಂಬ ನುಡಿಯಂತೆಯಾಗುವುದು , ಪ್ರಸ್ತುತ ವಿಚಲಿತ ವಿದ್ಯಮಾನದಲ್ಲಿ  ನಾವು  ಬೆಳಿಗ್ಗೆ ಎದ್ದ ತಕ್ಷಣ  ಯಾವ  ಪತ್ರಿಕೆ ತೆಗೆಯಿರಿ  ಒಂದು ಪುಟ ತೆಗೆದರೆ ಸಾಕು ಒಂದಾದರು ಕೆಟ್ಟು ಸುದ್ದಿ ಇದ್ದೆ ಇರುತ್ತದೆ , ದೂರದರ್ಶನ ಆನ್ ಮಾಡಿದ್ದಾರೆ ಸಾಕು ಬರೀ ಸುದ್ದಿ ಚಾನಲ್ ನಲ್ಲಿ ಭ್ರಷ್ಟಾಚಾರ   ,  ಶೋಷಣೆ  ,  ಕೊಲೆ ಗಲಿಭೆ  ಸುಲಿಗೆ   , ಹೆಣ್ಣಿನ ಮೇಲೆ ಅತ್ಯಾಚಾರ  ಬಲಾತ್ಕಾರ , ಆರೋಪ ಪ್ರತ್ಯಾರೋಪ ಮಾಡುವವರನ್ನು ಕಾಣಬಹುದು  ,  ನನ್ನ ಕಾಳಜಿ ಯುವಶಕ್ತಿ  ಮೇಲೆ  ಒಲವು ಹೆಚ್ಚು  , ಅವರೇ ಮುಂದಿನ ಪ್ರಜಾ ಸೇವಕರು  ,  ಅವರಿಗೆ ಮಾರ್ಗದರ್ಶನ ಅವಶ್ಯಕತೆಯಿದೆ  ,  ಯುವಕರು ದುರಭ್ಯಾಸ ,  ಸ್ವಾರ್ಥಿಗಳಾಗದೆ , ನಾಡು , ದೇಶ , ಗುರು ಹಿರಿಯರ  ಬಗ್ಗೆ ಅಭಿಮಾನ , ಗೌರವ ನೀಡುವಂತೆಯಾಗಿರಬೇಕು , ಸಮಾಜದ ಉದ್ಧಾರಕ್ಕಾಗಿ ಶ್ರದ್ಧಾ   ಭಕ್ತಿಯಿಂದ  ಪ್ರಾಮಾಣಿಕರಾಗಿ ಕರ್ತವ್ಯ ನಿರ್ವಹಿಸುವಂತಾಗರಾಗಿರಬೇಕು  ,  ಭ್ರಷ್ಟ ವ್ಯವಸ್ಥೆ ವಿರುದ್ಧ ಪಿಡುಗುಗಳನ್ನು ನಿಯಂತ್ರಿಸುವ ಶಕ್ತಿ  ,  ನಮ್ಮ ಯುವಶಕ್ತಿಯಾಗಿರಬೇಕು , ಅದಕ್ಕೆ ಬೇಕು ಸರಿಯಾದ  ವಿದ್ಯೆ – ಜ್ಞಾನ ಎಂಬ ಅಸ್ತ್ರ .
ನಾಡು ದೇಶಾಭಿಮಾನ   ಸಮಾಜದ ಉದ್ಧಾರಕ್ಕಾಗಿ , ನಿರ್ಗತಿಕರ ದಲಿತರ ನೊಂದವರ ಪರವಾಗಿ ಸೇವೆ ಮಾಡುವಂತಾಗಲಿ , ಅದೇ ಭಗವಂತನ ಸೇವೆ ಎಂಬ ಅರಿವಿರಲಿ , ನಾಡು – ನುಡಿ , ರೈತರ  ,  ಯೋಧರ , ಸುಧಾರಕಾರ , ಹರಿಕಾರರ , ವಿಜ್ಞಾನಿ – ಸಂಶೋಧಕರ , ಮಕ್ಕಳ , ಸಮಾಜದ ಹಿತಾಸಕ್ತಿಗಳನ್ನು ಕಾಪಾಡುವವರ ಬಗ್ಗೆ ಓದಿ ತಿಳಿದು ಅರ್ಥೈಸಿಕೊಂಡು ನಡೆಯಬೇಕಾಗಿದೆ .
ಇಂದಿನ ಕೇಲವು ಯುವಕ –  ಯುವತಿಯರು , ಬರೀ ಉದ್ದುದ್ದ ಮಾತನಾಡುತ್ತಾರೆ  ,  ಬರೀ ಮಾತನಾಡಿದರೆ ಸಾಲದು ,  ನಮ್ಮ ನಾಡು , ದೇಶ , ಭಾಷೆ , ಜಲ , ಸಂಸ್ಕಾರ –  ಸಂಸ್ಕೃತಿ  ಮಾನವೀಯತೆಯನ್ನು ಪಾಲಿಸಬೇಕು  ,  ಅವರೇ ಪಾಲಿಸದೇ ಮರೆಯುತ್ತಿದ್ದಾರೆ , ಇದು ಮುಂದಿನ ಭವಿಷ್ಯತ್ ಕ್ಕೆ ಅಪಾಯಕಾರಿಯಾದ ಬೆಳವಣಿಗೆ ಯಾಗಲಿದೆ  , ಈಗ  ಇದು ವಿಪರ್ಯಾಸದ ಸಂಗತಿಯಾಗಿದೆ .

ಯುವಕರು ಭ್ರಷ್ಟವ್ಯವಸ್ಥೆಯ ವಿರುದ್ಧ ಕಾನೂನು ಪ್ರಕಾರವಾಗಿ ಸಿಡಿದ್ದೇಳುವ ಗುಣ ನಿಮ್ಮದಾಗಿರಲಿ , ಹಾಗೇ  ”  ಕನ್ನಡವೇ ಸತ್ಯ , ಕನ್ನಡವೇ ನಿತ್ಯ “. ನಮ್ಮ ದೇಶ ಯೋಧರ ಬಗ್ಗೆ ಹೆಮ್ಮೆಯಿರಲಿ , ” ಎಲ್ಲೇ ಇರು ಹೇಗೆ ಇರು  ಎಂದೆಂದಿಗೂ ನೀ ಭಾರತೀಯನಾಗಿರು  ”   ಸಮಾಜಕ್ಕೆ ಪ್ರೀತಿಪಾತ್ರರಾಗಿರೀ , ಸ್ವ – ದುಡಿಯುವ ಕೆಚ್ಚೆದೆಯ ಶೂರರಾಗಿರಿ , ಸಾಲ  –  ಶೂಲದಿಂದ ದೂರವಿದ್ದು  , ” ಹಾಸಿಗೆ ಇದ್ದಷ್ಟು ಕಾಲು ಚಾಚಿ . ”   ನೀವು ಸಾಕ್ಷರರಾಗಿರೀ  ಅನ್ಯರನ್ನೋ ವಿದ್ಯಾವಂತರಾಗಿಸಿರೀ , ಮನೆಯವರಿಗೆ ನಾಡು ದೇಶಕ್ಕೆ ನಂದಾದೀಪವಾಗಿ , ” ಯುವಶಕ್ತಿ ಸಮಾಜದ ಭವ್ಯ ಶಕ್ತಿ  ”  ನೀವಾಗಬೇಕು ” .  ಇರುವ  ಭಾಗ್ಯವ ನೆನೆದು , ಬಾರೆನೆಂಬುದನ್ನು ಬಿಡು , ಹರುಷಕ್ಕಿದೆ ದಾರಿ  ”  ಡಿ ವಿ ಜಿ ಅವರ ಕವಿತೆಯ ಸಾಲಿನಂತೆ , ಬಾರೆನೆಂಬುದನ್ನು ಬಿಡು  ,  ಆಗ ಹರುಷಕ್ಕಿದೆ ದಾರಿ ಎಂಬಂತೆ ಬಾಳುವುದ ಕಲಿಯಬೇಕಾಗಿದೆ .

ಇವುಗಳನ್ನು ನಿಯಂತ್ರಿಸುವ ಶಕ್ತಿ ಯುವಶಕ್ತಿ ನೀವಾಗ ಬೇಕು , ಜನರಲ್ಲಿ ಪರಿಸರ ಕಾನೂನು ಸಂರಕ್ಷಣೆಯ ಬಗ್ಗೆ ಅರಿವು , ಮಾನವೀಯ ಗುಣಗಳೊಂದಿಗೆ ಪರಿಸರ ಜಾಗೃತಿ , ಜಾಗತೀಕರಣ , ನಗರಿಕರಣ , ಉದಾರೀಕರಣ , ಹೆಸರಿನಲ್ಲಿ  ನಾವು ನಮ್ಮನ್ನೇ ಮರೆತು , ಹಳ್ಳಿಯ ಕಡೆಗಾಣಿಸಿ , ನಗರದ ವ್ಯಾಮೋಹಕ್ಕೆ ಬೆರಗಾಗಿ ಇರುವ ಕೃಷಿ ಜಮೀನನ್ನು ಮಾರಿ ಬಂದು ನಗರ ವಾಸಿಗಳಾಗುತ್ತಿದ್ದೇವೆ  , ಇಂದು ಸಾಮಾನ್ಯ ಜನ ಬದುಕು ಕಟ್ಟಿಕೊಳ್ಳಲು ತುಂಬಾ ಶ್ರಮಿಸುತ್ತಿದ್ದಾನೆ , ಶುದ್ಧ ಗಾಳಿ , ನೀರು , ಬೆಳಕು  ,  ಶಾಂತಿ  ನೆಮ್ಮದಿಯ ಹುಡುಕುವಂತಾಗಿದೆ ,  ಬರೀ ಟೆನ್ಷನ್ ಟೆನ್ಷನ್  ಒತ್ತಡದಲ್ಲಿ ಜೀವನ ಸಾಗಿಸುವಂತ ಪರಿಸ್ಥಿತಿ ಆವರಿಸಿದೆ  ,  ದುಡಿಮೆಗೆ ಸರಿಯಾದ ಪ್ರತಿಫಲ ಸಿಗದೇ , ಹಳ್ಳಿಗಳಲ್ಲೂ ರಾಜಕೀಯ ಬೆರೆತು ಸಂಬಂಧದ ಕೊಂಡಿ ಕಳುಚುತ್ತಿದೆ , ದ್ವೇಷದ ಕಿಡಿ ಮನೆ ಮಾಡಿದೆ , ಅವಿಭಕ್ತ ಕುಟುಂಬಗಳು  ಒಡೆದು ವಿಭಕ್ತ ಕುಟುಂಬಗಳಾಗುತ್ತಿವೆ , ”  ಭಗವಂತ ಕೊಟ್ಟಿರುವ ವರಗಳಲ್ಲೆಲ್ಲ ಅತ್ಯಂತ ಉನ್ನತವಾದದ್ದು ನಿಷ್ಕಳಂಕ ಪ್ರೇಮ ,   ” ಭಾಸ್ಕರಿನಿಗೂ ಬೆಳಕುಗಳುಂಟು   , ಆಗಸಕ್ಕೂ ಜಲಕ್ಕೂ ಇರುವ ನಂಟು  , ಪೃಥ್ವಿಗೆ ಚಲನೆಯು ಉಂಟು ,  ಹೀಗೆ  ಸಮಗ್ರ ಲೋಕ ಅನನ್ಯ ಅಂಟುಗಳ ದೊಡ್ಡ ಗಂಟು  ಈ ಜಗತ್ತು .
” ಈ ಸಂಬಂಧವಿಲ್ಲದಿದ್ದರೆ ವಿಶ್ವವೇ ಶೂನ್ಯದಂತೆ  , ನಾನಾ  ಅಂಟುಗಳ ಬೃಹತ್ ಗಂಟು  ಈ ಜಗತ್ತು”. ಸಹಜ ಬಯಸುವುದು  ಸಹನ ಶೀಲ  ಸಖ್ಯವನ್ನೇ ಹೊರತು  ಬೇರೆರನ್ನು ಅಲ್ಲ , ಸಹನೆಯನ್ನು ಹುಡುಕುತ ಹೋದಂತೆ ವದನದಲ್ಲಿ ಪ್ರಶಾಂತತೆ , ವರ್ಚಸ್ಸು ವರ್ಧಿಸುತ್ತದೆ , ಹಾಗೇ ಜ್ಞಾನ ಬೆಳೆಸಿಕೊಂಡಷ್ಟು ಯುವ ಪೀಳಿಗೆಗೆ ಒಂದು ಗುರಿ ಹಾಗೂ ಗುರುವು ದೊರೆಯುತ್ತಾನೆ ,  ಅದನ್ನು ಮರೆಯಬಾರದು  ,  ಹಾಗೇ ಗುರು ಶಿಷ್ಯರ  ಸಂಬಂಧ ಶ್ರೇಷ್ಠವಾದದ್ದು ,  ಬಾಂಧವ್ಯಕ್ಕೆ ಬಾರದಿರಲಿ ಚ್ಯುತಿ . ನೀವು ಬೆಳೆದು  ಅನ್ಯರಲ್ಲೂ ಜ್ಞಾನ ತ್ಯಾಗ  ನಿಸ್ವಾರ್ಥ ಭಾವ ಮೂಡಿಸುತ , ನೀವಾಗಿರಿ ದೇಶ ಪ್ರೇಮಿ .

ತಲೆ ಕೊಡುವ ತಳೆದಿರಳು , ಕೈ ಕತ್ತಿ ಪಿಡಿದಿರಲು /
ಬಳಕು ಹಗ್ಗದ ಮೇಲೆ ತಾನಡಿಯನಿಡುತ//
ಕೆಲ ಬಲಕೆ ಬೀಳದೆ ಮುನ್ನಡೆವ ದೊಂಬನುಪಾಯ/
ಕಲೆಯೆ ಜೀವನ ಯೋಗ ಮುಂಕುತಿಮ್ಮ “.

ಎಂಬ ಡಿ ವಿ ಜಿ ಅವರ ಮುಕ್ತಕ ನುಡಿಯೊಂದಿಗೆ ,
ಸ್ವಾಮಿ ವಿವೇಕಾನಂದರ ನುಡಿಯಂತೆ –  ” ಏಳಿ ಎದ್ದೇಳಿ , ಗುರಿ ಮುಟ್ಟುವ ತನಕ ನಿಲ್ಲದಿರಿ . “
ಎಂಬಂತೆ ನಡೆಯಿರಿ ಎಂಬ ಬರಹದೊಂದಿಗೆ ನನ್ನ ಈ ಬರಹಕ್ಕೆ ವಿರಾಮ ನೀಡುತ್ತಿದ್ದೇನೆ ..


Leave a Reply

Back To Top