ಕಾವ್ಯ ಸಂಗಾತಿ
ಭುವನೇಶ್ ಓಂಕಾರ್
ರಸ್ತೆ ಅಂಚಿನ ಬೆಂಚು
ಹೀಗೆ ಒಂದು ಮಳೆಗಾಲದಲ್ಲಿ
ರಸ್ತೆ ಅಂಚಿನ ಬೆಂಚು
ಒಂದೇ ಕುಳಿತು
ಜಡಿ ಮಳೆಗೆ ನೆನೆನೆನೆದು
ನೆನಪಿಸಿ ಕೊಳ್ಳುತಿತ್ತು
ಕುಳಿತವರ ಕಥೆಯ..
ಕೂತು ಮಾತನಾಡಿದವರ
ಮಾತನಾಡದೆ ಕೂತವರ
ವ್ಯಥೆಯ…
ಕಿವಿಯಲ್ಲಿ ಪಿಸುಗುಡುತ
ಕೆನ್ನೆಗೆ ಮುತ್ತಿಟ್ಟವನ
ಜಡೆ ಉದ್ದದ ಮಲ್ಲಿಗೆ
ಮಾಲೆ ಮುಡಿಸಿದವನ
ಬೆರಳುಗಳ ನಡುವೆ
ಬೆರಳುಗಳ ಬೆರಸಿದವನ
ನೆನಪಿಸಿ ಕೊಳ್ಳುತ್ತಿತ್ತು …
ಕುಡಿದು ಹೊರಳಾಡಿ
ಬೆಂಚಿನಡಿಯಲ್ಲಿ ಬಿದ್ದವನನ್ನ
ಮನೆಯಿಲ್ಲದೆ ಮಲಗಿದವನ
ಹಾಳು ಗೊರಕೆಯ ಸದ್ದನ್ನ
ನೆನಪಿಸಿ ಕೊಳ್ಳುತ್ತಿತ್ತು …
ಭುವನೇಶ್ ಓಂಕಾರ್
ಎಂತಹ ಆಳದ ಮಾತು
ಅದೆಷ್ಟು ನೆನಪುಗಳೋ ಅ ಬೆಂಚಿಗೆ….