ಕಾವ್ಯ ಸಂಗಾತಿ
ಸವಿತಾ ದೇಶಮುಖ
ಜೀವ ಧಾರೆ
ಹಚ್ಚ ಹಸಿರ ವನಸಿರಿ
ನಮ್ಮ ಉಸಿರು
ನೀ ಸೂಸುವ ಗಾಳಿ
ಜೀವ ನಾಡಿ
ನೀನಿಲ್ಲದ ಒಂದು
ಕ್ಷಣ ಉರುಳದು,
ಹಗಲೆಲ್ಲ ವಿಷವ ನುಂಗಿ
ಇಯುವಿ ಜೀವಸತ್ವ
ನಮ್ಮ ನರನಾಡಿಗೆ
ತುಂಬುವೆ ಜೀವ
ನಿನ್ನ ಮಡಿಲಲ್ಲಿ ಆಸರೆ
ಜೀವಾಗಿ ತಾಯಿಯಾಗಿ
ಹರಿಸುವೆ ಆದರೆ
ಮನುಜ ನಿನ್ನ ಆಸೆಗೆ
ಎಲ್ಲಿ ಎಲ್ಲೆ
ಸ್ವಾರ್ಥ ಸೌಖ್ಯಕ್ಕಾಗಿ
ಇಡುವೆ ಕೊಡಲ ಧಾರೆ
ವನಸಿರಿಯ ಕರುಣೆಯ
ಮರೆಯದಿರು
ಚಿನ್ನದ ವನಕ್ಕೆ ಕನ್ನ ಹಾಕದಿರು
ಧರೆ ಹತ್ತಿ ಉರಿದೊಡೆ ಎತ್ತ
ಹೋಗುವೆ ಮನುಜ
ಅನ್ನ ನೀರು ಗಾಳಿಗೂ
ಗತಿ ಸಿಗದೆ….
ನೇಸರನೆ ಧರೆಗಿಳಿದು
ಬೆನ್ನಟ್ಟಿದರೆ
ಎತ್ತಮರೆಮಾಚುವೆ
ನಾವಾಗುವೆವು
ವಿಕಲ ಮತಿಯರು ಮರೆಯದಿರು……
ಸವಿತಾ ದೇಶಮುಖ
Good one