ಕಾವ್ಯ ಸಂಗಾತಿ
ಶಿವಮ್ಮ ಎಸ್ ಜಿ ಕೊಪ್ಪಳ
ಇಳೆಯ ಮಳೆ
ರಸಿಕ ಮನಕೆ ಮುದ.
ನೀಡುವ ವರ್ಷಧಾರೆ
ಹಸಿದ ಒಡಲಿಗೆ ಅನ್ನ.
ನೀಡುವ ಹರ್ಷಧಾರೆ.
ಉಸಿರು ಕಾಯ್ವಹಸಿರು ಫಲವಿವ
ಮುಸಲಧಾರೆ.
ಬಂತಿದೋ ಮತ್ತೆಬಂತು
ನಾಡಿಗೆ ಮಳೆ, ಮಳೆ.
ಬಿಸಿಲಬಳಲಿಕೆಗೆತಂತು.
ಕೊನೆಯದಾದ ಎಳೆ.
ಮಳೆ ಸುರಿದ ಮೇಲೆ.
ಇಳೆಗೆಆವರಿಸಿಕಳೆಕಳೆ .
ಮಳೆಯಿಂದ ಉಸಿರು.
ಉಸಿರೆಲ್ಲಾ ಹಸಿರು.
ಮಳೆಯಿಂದಹೊಲ.
ಗದ್ದೆಯೆಲ್ಲಾಪಚ್ಚೆಪೈರು.
ಮಳೆಯಿಂದಭುವೀಲಿ.
ಎಳೆದಿದೆಸಮೃದ್ಧಿತೇರು.
ಮಳೆಗಾಗಿ ತವಕಿಸಿದ.
ಜೀವಕೆ ಹರ್ಷೋಲ್ಲಾಸ
ಬೆಳೆಗಾಗಿ ನಿರುಕಿಸಿದ.
ರೈತನಿಗೆಸದಾಹರುಷ.
ಜೀವಕಳೆಗೆಕಾತರಿಸಿದ.
ಪೃಥ್ವಿಯೊಡಲಉಲ್ಲಾಸ.
ಮಕ್ಕಳಮನಮೋಹಕ.
ವಾಗುವ ಮಳೆ ಇದು.
ಯುವಕರಿಗೆ ಕನಸು. ನೀಡುವ ವರುಣವಿದು.
ನಾಡಿಗೆಲ್ಲಾನರನಾಡಿ.
ಒಡನಾಡಿವರ್ಷಧಾರಯಿದು
ಶಿವಮ್ಮ ಎಸ್ ಜಿ ಕೊಪ್ಪಳ