ಭಾರತಿ ಅಶೋಕ್ ಅವರ ಕವಿತೆ-ಅವಳಿಚ್ಚೆಯ ಹಗಲನ್ನಾಗಿಸು

ಕೇವಲ ನಾನಂದುಕೊಂಡ
ರಾತ್ರಿಯಾಗಿರಲಿಲ್ಲ ಅದು!

“ಈ ‘ರಾತ್ರಿ’ಯಾದರೂ
ಯಾಕೆ ಬೇಕಿತ್ತು” ಎಂದು
ಅಗಾಗ ಭಾರವಾದ ಉಸಿರಿನೊಂದಿಗೆ ಹೊರ ಚೆಲ್ಲುವ ಅವಳ ಮಾತಿನ ನಿಹಿತ

‘ರಾತ್ರಿ’ ಬರೀ ರಾತ್ರಿಯಲ್ಲ,
ಹಾಗಾದರೆ ಅವಳು ಯಾವುದನ್ನು
ರಾತ್ರಿ ಎನ್ನುತ್ತಾಳೆ?
ಅದೆಂಥ ಘನಗೋರವಾದ ರಾತ್ರಿ ಇರಬಹುದು.
ಆ ಕರಾಳ ರಾತ್ರಿ ಅವಳ
ಬದುಕನ್ನು ಹೇಗೆ ದಹಿಸಿರಬಹುದು‌
ಊಹೂಂ …
ಕಲ್ಪನೆಗೆ ನಿಲುಕದು

ಹಾಗಾದರೆ ಅವಳು
ಹಗಲನ್ನು ಕಂಡಿರುವುದು ಹೇಗೆ!
ಹಗಲೆಂದರೆ ಏನಿರಬಹುದು

ಹೇ ದೇವ
ನೀನಿರುವುದೇ ಆದರೆ
ಅವಳಿಗೆ ಬರೀ ಹಗಲನ್ನೇ ಕರುಣಿಸು
ಇಲ್ಲವೇ ಕರಾಳ ರಾತ್ರಿಯನ್ನೇ ಅವಳಿಚ್ಚೆಯ ಹಗಲನ್ನಾಗಿಸು


Leave a Reply

Back To Top