ಲಹರಿ ಸಂಗಾತಿ
ಅಮೃತಾ ಎಂ.ಡಿ.
ಒಲವೆಂದರೇನು..?
ನೀನು ಇಲ್ಲವಾದರೆ ಸಾವೇ ಆ ಕ್ಷಣ*
ಬಹುಶಃ ಎಲ್ಲರ ಜೀವನದಲ್ಲಿಯೂ ಹಾದು ಹೋಗುವಂತಹ ಸಂದರ್ಭವಿದು..
ಪ್ರೀತಿಗೆ ಇರುವ ಅದ್ಬುತ ಶಕ್ತಿಯೇ ಅಂತದ್ದು..
ಸಾವು – ನೋವು ಲೆಕ್ಕಕ್ಕೆ ಬಾರದು,
ಹಗಲು-ರಾತ್ರಿಯ ಪರಿವೆ ಇಲ್ಲದ್ದು.. ಎಲ್ಲ ವಾಸ್ತವವನ್ನು ಮರೆತು ಕೇವಲ ಭ್ರಮಾ ಲೋಕದಲ್ಲಿ ಸಂಚಲನ ಮೂಡಿಸುವ ಮಂಪರು..
ಇದು ನನ್ನದೆ ದೃಷ್ಟಿ ಕೋನವಿರಬಹುದು ,
ನಿಸ್ವಾರ್ಥ ಪ್ರೀತಿಯು ಜೀವಂತಿಕೆ ಶೇಕಡಾವಾರು ತುಂಬಾ ಕಡಿಮೆ.
ಇಂದಿನ ಪೀಳಿಗೆ ಹೊರಟಿರುವ ಹಾದಿ, ಅವರ ಪ್ರಕಾರ ಪ್ರೀತಿ, ಅದರ ಜೊತೆಗೆ ಇಂದಿನ ಸಿನಿಮಾಗಳು, ಸಾಮಾಜಿಕ ಜಾಲತಾಣಗಳು ಸಹ ಉರಿಯುವ ಬೆಂಕಿಗೆ ತುಪ್ಪ ಸುರಿದ ಹಾಗೆ, ಹಾದಿ ತಪ್ಪುತ್ತಿರುವ ಪೀಳಿಗೆಗೆ ಸಹಾಯವಾಗುವಂತಹ ವಾತಾವರಣವನ್ನೇ ಸೃಷ್ಟಿಸಿದೆ.
ಸಲಿಗೆಯ ಮಾತು, ಕಾಳಜಿ, ಒಳಿತೆ ಸಂಭವಿಸಲಿ ಎಂದು
ಕೈ-ಗೊಳ್ಳುವ ನಿರ್ಧಾರಗಳು , ಇವುಗಳು ಎಂದು ಪ್ರೀತಿಯಾಗದು, ಆದರೆ ನಮ್ಮ ಪೀಳಿಗೆ ಇದನ್ನೇ ಪ್ರೀತಿ ಎಂದು ಜೀವವನ್ನೇ ಮುಡಿಪಿಡುವಷ್ಟು ಮರುಳಾಗಿ ಯಾಕೆ ಬದಲಾಗಿ ಹೋಗುತ್ತಾರೋ ನನಗೆ ತಿಳಿಯದು..
ನಾ ಕಂಡ ಹಾಗೆ ,ನನ್ನ ಬದುಕಿಗೆ ತೀರ ಹತ್ತಿರದವರೆ , ಅವರ ಕಿರುಬೆರಳ ಹಿಡಿದೆ ಹೆಜ್ಜೆ ಹಾಕಿದ್ದು,
ಪ್ರೀತಿಸಿ ಮದುವೆ ಆದರು, 15 ವರುಷಗಳ ಹಿಂದೆ ಈ ಮದುವೆಯನ್ನು ಯಾರು ಒಪ್ಪಲಿಲ್ಲ, ಅವರ ಆಯ್ಕೆ ಕೂಡ ಉತ್ತಮವಾಗಿರಲಿಲ್ಲ..
ಪ್ರೀತಿ ಎಂದರೆ ಪಾರದರ್ಶಕತೆ ಆ ಪಾರದರ್ಶಕತೆ ಅವರಲ್ಲಿ ಕಾಣಲಿಲ್ಲವೇನೋ..,
ನಂಬಿಕೆಯ ಭರ್ಜಿ ನಾಟ ಬೇಕಾದ ಕಡೆ ನಾಟಲಿಲ್ಲವೇನೋ
ಒಟ್ಟಿನಲ್ಲಿ ಸಮುದ್ರದ ನಟ್ಟ ನಡುವೆ ಆಧಾರ ಕಳೆದು ಕೊಂಡ ಬದುಕು ಅವರದು..
ಅತ್ತ ಹೆತ್ತವರ ಪ್ರೀತಿ ಇಲ್ಲ, ಇತ್ತ ಯಾರಿಗಾಗಿ ಸರ್ವಸ್ವವನ್ನೂ ತೊರೆದು ಬಂದರೋ ಅವನ ಎದೆಯ ದನಿ ಸಂತೈಸಲಿಲ್ಲ.
ಮತ್ತೊಂದು ನಿದರ್ಶನ , ಪ್ರೀತಿ ಕುರುಡಂತೆ, ಕುರುಡಾಗಿ ಒಪ್ಪಿ ನಲಿಯುವ ಸಂದರ್ಭದಲ್ಲಿ ನಲಿವಾಗಿ ಬಂದವ ನರಕದ ಬಾಗಿಲು ತೆರೆಸಿದ..
ಹಾಗೆಂದು ಬದುಕು ದುಸ್ತರ ಏನಲ್ಲ, ನೆಮ್ಮದಿ, ನಂಬಿಕೆ ಇಲ್ಲದ ಜೀವನದಲ್ಲಿ ಪ್ರೀತಿಗೆ ವ್ಯಾಲಿಡಿಟಿ ತುಂಬಾ ಕಡಿಮೆ ಕಂಡ್ರಿ.
ನಮ್ಮ ಜೊತೆಯಲ್ಲಿಯೇ ಓದಿದ ಹುಡುಗಿ,
ಓದಿನಲ್ಲಿ ಮುಂದು, ಎಲ್ಲರನ್ನೂ ಆತ್ಮೀಯವಾಗಿ ತಬ್ಬಿ ನಲಿಯುವುದು ಅವಳ ಗುಣ, ಎಲ್ಲರನ್ನೂ ತನ್ನಡೆಗೆ ಒಳ್ಳೆಯ ರೀತಿಯಲ್ಲಿ ಸೆಳೆಯುತ್ತಿದ್ದವಳ ಬದುಕಿಗೆ ಪ್ರೀತಿಯ ಆಗಮನ ಆಗಿತ್ತು .
ಅಲ್ಲಿಂದ ಅವಳ ಬದುಕು reverse gare ಅಲ್ಲಿ ಚಲಿಸೋಕೆ ಶುರು ಆಯಿತು.
ಅದೆಷ್ಟೇ ಹೇಳಿದರು, ಎಲ್ಲ ಭಾಷೆ, ಮಾತಿನ ಪ್ರಯೋಗ ಆದರೂ ಪ್ರೀತಿಯ ಅಮಲಿನಿಂದ ಹೊರಗೆ ಬರಲಿಲ್ಲ, ಆಗಲು ನನ್ನದು ಒಂದೇ ಮಾತು, this is not an age to fall in love.. ಜವಾಬ್ದಾರಿಗಳಿಗೆ ಜಬೂಬು ಕೊಡಬೇಡ, ಬದುಕು ಅದ್ಬುತವನ್ನೇ ಮಡಿಲಿಗೆ ತುಂಬುತ್ತದೆ ಎಂಬ ಮಾತುಗಳು ಅಂದು ವರ್ಜ್ಯ ಆಗಿತ್ತು.
ನಂತರ ಬ್ರೇಕ್ ಅಪ್ ಆಯ್ತು, ಕಾರಣಗಳ ತಿಳಿಯುವ ವ್ಯವಧಾನ ನನಗೆ ಇರಲಿಲ್ಲ, ಆದ್ರೆ ಅವಳು ಅನುಭವಿಸಿದ ಒಂಟಿತನದ ನೋವು, ಅವಳು ಪಟ್ಟ ಪಾಡು ಅಷ್ಟಿಷ್ಟಲ್ಲ. ಖುಷಿ, ಬುದ್ದಿವಂತಿಕೆ ಎಲ್ಲವು ಮರೆಯಾಯಿತು.
ಪ್ರತಿ ಕಣ್ಣೀರಿನ ಬಿಂದುವಿಗೆ ಬೆಲೆ ಕಟ್ಟಲು ಆಗದು,
ಅಯೋಗ್ಯರಿಗೆ ಕಣ್ಣಿನ ಪಸೆ ಕೂಡ ದಕ್ಕಬಾರದು.
ಪ್ರೀತಿ ಎಂದರೆ ಬೆಂದು ಬೆಳಕಾಗುವುದು, ಬೇಯುತ್ತಲೇ ಬೆರೆಯುವುದು.
ಸಂಬಂಧಗಳ ಹೆಸರಲ್ಲಿ ಆಗುವಂತಹ ಪ್ರೀತಿಯ ಪಾಡು ಆ ದೇವರಿಗೆ ಪ್ರೀತಿ.
ಮನುಷ್ಯನ ಸಹಜ ಗುಣ ತನಗೆ ಸಿಗದ ಪ್ರೀತಿಯ ಮೇಲೆ ಆಸೆ ಪಡುವುದು ಹೆಚ್ಚು..
ಅದೊಂದು ಹುಡುಕಾಟ ಇರುತ್ತೆ, ಅಣ್ಣ ಬೇಕು, ತಮ್ಮ ಬೇಕು, ಅಕ್ಕ ಬೇಕು, ತಂಗಿ ಬೇಕು ಎನ್ನುವ ಹುಡುಕಾಟ..
ಆಯಾ ಹುಡುಕಾಟದಲ್ಲಿ ಜೊತೆಯಾದ ಜೀವಗಳು ಎಷ್ಟು ದಿನ ಬಾಳ ಪುಟದಲ್ಲಿ ಸಾಗಲು ಸಾಧ್ಯ ಹೇಳಿ..?
ಅದೆಷ್ಟು ದಿನ ಬದುಕಿನಲ್ಲಿ ನಗುವಿನ ರಂಗು ಚೆಲ್ಲಲು ಸಾಧ್ಯ .?
ಇಲ್ಲಿ ರಕ್ತ ಸಂಬಂಧಗಳಲ್ಲಿಯೇ ಒಡಕು ತುಂಬಿರುವಾಗ, ನಂಬಿಕೆ ಕೋಟೆಗಳೇ ಬಿರುಕು ಬಿಟ್ಟು ನಿಂತಿರುವಾಗ , ಸಾಮಾಜಿಕ ಜಾಲತಾಣಗಳು ಅದೆಂತಾ ಗಟ್ಟಿ ಸಂಬಂಧಗಳ ಕೊಡಬಹುದು.. ?
ಬದುಕಿನಲ್ಲಿ ಸುತ್ತ ಮುತ್ತ ಇರುವರ ಜೀವನದ ಜೊತೆಗೆ ಆಗುತ್ತಿರುವ ಏರಿಳಿತ ನೋಡಿದ್ರೆ ಇಲ್ಲಿ ಪ್ರೀತಿ ಪ್ರಣಯ ಅನ್ನೋದು ಮಿಥ್ ಎನ್ನಿಸುತ್ತದೆ..
ಅದೆಷ್ಟೋ ದಾಂಪತ್ಯಗಳು ಕದಡಿ ಹೋಗಿವೆ, ಮಕ್ಕಳ ನೆಪದಲ್ಲಿ ಜೊತೆಯಲ್ಲಿ ಇದ್ದಾರೆ,
ಅದೆಷ್ಟೋ ರಕ್ತ ಸಂಬಂಧಗಳ ನಡುವೆ ಬಿರುಕಿನ ಅಲೆಯೇ ಎದ್ದಿದೆ,ಆದರೂ ಕರ್ತವ್ಯದ ಹೆಸರಲ್ಲಿ ಜೊತೆಗೆ ಇದ್ದಾರೆ,
ಅದೆಷ್ಟೋ ಸಂಬಂಧಗಳು ಸತ್ವ ಕಳೆದು ಕೊಂಡಿದೆ, ಆದ್ರೂ ಜವಾಬ್ದಾರಿ ನೆಪದಲ್ಲಿ ಜೀವಂತ ಇದ್ದಾರೆ..
ಪ್ರೀತಿ ಅನ್ನೋದು ಅಮಲಾಗದೆ, ಉಸಿರಾಗಬೇಕು ಎಂದರೆ ಒಂದು ಕೈ ಇಂದ ಎಂದು ಆಗದು…..
ಪ್ರೀತಿಸಿ ಮದುವೆ ಆದವರು ಸಹ ಕಣ್ಣ ಮುಂದ್ದಿದ್ದಾರೆ,
ಯಾವುದೇ ರಕ್ತ ಸಂಬಂಧ ಇಲ್ಲದೆ ಅಕ್ಕನಾಗಿ,ತಮ್ಮನಾಗಿ,ಅಣ್ಣನಾಗಿ, ತಂಗಿಯಾಗಿ ಜೊತೆ ಇರುವರು ಸಹ ಹಾದಿ ಬದಿಯಲ್ಲೇ ಹಾದು ಹೋಗುತ್ತಾರೆ..
ಇಲ್ಲಿ ಇವರುಗಳ ನಡುವೆ ಪ್ರೀತಿ ಅಷ್ಟೇ ಇಲ್ಲ, ಏನೇ ಆದರೂ ಜೊತೆ ನಿಲ್ಲುವ ಸ್ಥೈರ್ಯ ಇದೆ.. ನಡು ದಾರಿಯಲ್ಲಿ ಉಟ್ಟು ಕಳೆದರೂ , ಒಗ್ಗಟ್ಟಾಗಿ ದಡ ಸೇರುವ ಚಾಕ ಚಕ್ಯತೆ ಇದೆ ,ಎಂಥ ಸಂದರ್ಭದಲ್ಲೂ ಕುಗ್ಗದೆ ನಿಂತು ಕಾಯುವ ಶಕ್ತಿ ಇರ್ಬೇಕು ಅಂತ ಹೇಳುತ್ತಾ
ಅಮೃತ ಎಂ. ಡಿ
ಚೆನ್ನಾಗಿದೆ